×
Ad

ಯೆನೆಪೋಯ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಅರ್ಜಿ ಆಹ್ವಾನ

Update: 2018-07-10 20:19 IST

ಉಳ್ಳಾಲ, ಜು. 10: ಯೆನೆಪೊಯ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯವು 2014 ವರ್ಷದಿಂದ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಕೋರ್ಸನ್ನು ಪ್ರಾರಂಭಿಸಿದ್ದು, ಈ ಕೋರ್ಸು ಎರಡು ವರ್ಷಗಳ ಅವಧಿಯದ್ದಾಗಿದ್ದು ನಾಲ್ಕು ಸೆಮಿಸ್ಟರುಗಳನ್ನು ಹೊಂದಿದೆ.

ವಿದ್ಯಾರ್ಥಿಗಳು ಈ ಸ್ನಾತಕೋತ್ತರ ಪದವಿ ಶಿಕ್ಷಣದ ಅವಧಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ವೈದ್ಯಕೀಯ ಮತ್ತು ಮಾನಸಿಕ ಸಮಾಜ ಕಾರ್ಯ ಎಂಬ ಎರಡು ಮುಖ್ಯ ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿ ಅಧ್ಯಯನ ನಡೆಸುವ ಅವಕಾಶ ಇರುತ್ತದೆ.

ಈ ಸ್ನಾತಕೋತ್ತರ ಪದವಿ ವ್ಯಾಸಂಗವನ್ನು ಪೂರೈಸಿದ ಪದವೀಧರರಿಗೆ ಸ್ವಯಂ ಸೇವಾ ಕ್ಷೇತ್ರ, ಆರೋಗ್ಯ ಸೇವೆ ಹಾಗೂ ಕಾರ್ಪೋರೇಟ್ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳನ್ನು ಹೊಂದುವ ವಿಫುಲ ಅವಕಾಶಗಳಿವೆ. ಆರೋಗ್ಯ ಸೇವಾ ಕ್ಷೇತ್ರವಲ್ಲದೆ ಸರ್ಕಾರ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆ, ಖಾಸಗಿ ರಂಗದಲ್ಲಿ ಅಭಿವೃದ್ಧಿ, ಪುನರ್ವಸತಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿಪರರಾಗಿ ಸೇವೆ ಸಲ್ಲಿಸಬಹುದಾಗಿದೆ.

ಪರಿಣಿತ ಬೋಧಕ ವೃಂದ, ಜನ ಸಾಮಾನ್ಯರಿಗೂ ಕೈಗೆಟಕುವ ವ್ಯಾಸಂಗ ಶುಲ್ಕ, ಕೇತ್ರ ಕಾರ್ಯಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಆಸ್ಪತ್ರೆ ,   ಗ್ರಾಮೀಣ ಹಾಗೂ ನಗರ ಆರೋಗ್ಯ ವಿಸ್ತರಣಾ ಕೇಂದ್ರಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಈ ಕೋರ್ಸಿನ ವಿಶೇಷತೆಯಾಗಿದ್ದು ಪ್ರವೇಶವನ್ನು ಬಯಸುವವರು -08242204668 2116/2289 9448529361 ವಿಸ್ತರಣೆ: ಅಥವಾ ದೂರವಾಣಿಯಲ್ಲಿ ಸಂಪರ್ಕಿಸಬಹುದು. ಪ್ರವೇಶಕ್ಕೆ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 31.07.2018. ಪ್ರವೇಶ ಅರ್ಜಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ www.yenepoyauniversity.edu.in ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ msw@yenepoya.edu.in  ಗೆ ಇಮೈಲ್ ಕಳುಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News