×
Ad

ಎಸ್ ಡಿ ಪಿ ಐ: ನೂತನವಾಗಿ ಆಯ್ಕೆಯಾದ ರಾಷ್ಟ್ರ, ರಾಜ್ಯ ನಾಯಕರಿಗೆ ಸನ್ಮಾನ

Update: 2018-07-10 20:32 IST

ಮಂಗಳೂರು, ಜು. 10 : ಎಸ್.ಡಿ.ಪಿ.ಐ. ಪಕ್ಷದ  2018 - 2021 ರ ಸಾಲಿನ ನೂತನ ಸಮಿತಿಯ ಆಂತರಿಕ ಚುಣಾವಣೆಯು ಇತ್ತೀಚೆಗೆ ನಡೆಯಿತು.

ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಪ್ರತಿನಿಧಿ ಸಭೆಯಲ್ಲಿ ನೂತನವಾಗಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡ  ಅಲ್ಪೋನ್ಸ್ ಪ್ರಾಂಕೋ ಮತ್ತು ಮೈಸೂರಿನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ  ಆಯ್ಕೆಯಾದ ರಿಯಾಝ್ ಫರಂಗಿಪೇಟೆ , ಮತ್ತು ರಾಜ್ಯ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಅಶ್ರಫ್ ಮಾಚಾರ್ ಅವರಿಗೆ  ಎಸ್.ಡಿ.ಪಿ.ಐ. ನೂತನ ದ.ಕ.ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ  ಅಧ್ಯಕತೆಯಲ್ಲಿ ಅಭಿನಂಧನಾ ಕಾರ್ಯಕ್ರಮ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್.ಎಚ್., ಜಿಲ್ಲಾ  ಉಪಾಧ್ಯಕ್ಷರುಗಳಾದ ಇಕ್ಬಾಲ್ ಐ.ಎಂ.ಆರ್. ಮತ್ತು ಆಂಟನಿ ಪಿ.ಡಿ., ಜಿಲ್ಲಾ ಕೋಶಾಧಿಕಾರಿ ನೂರುಲ್ಲಾ ಕುಲಾಯಿ ಮತ್ತು ಜಿಲ್ಲಾ  ಸಮಿತಿ ಸದಸ್ಯರು ಹಾಗೂ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಅಶ್ರಫ್ ಮಂಚಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News