ಕೋಟೆಕಾರು: ದೈವಮೂರ್ತಿಯ ಚಿನ್ನದ ಹಣೆಪಟ್ಟಿ ಕಳವು
Update: 2018-07-10 22:41 IST
ಮಂಗಳೂರು, ಜು.10: ತಾಲೂಕಿನ ಕೋಟೆಕಾರು ಗ್ರಾಮದ ಸುಳ್ಳೆಂಜೀರುಗುತ್ತು ಎಂಬಲ್ಲಿರುವ ಕಲ್ಲುರ್ಟಿ ದೈವಸ್ಥಾನದ ಬಾಗಿಲಿನ ಬೀಗ ಮುರಿದು ದೈವದ ಮೂರ್ತಿಯ ಸುಮಾರು 20 ಸಾವಿರ ರೂ. ಮೌಲ್ಯದ ಚಿನ್ನದ ಹಣೆಪಟ್ಟಿಯನ್ನು ಕಳವುಗೈದ ಘಟನೆ ನಡೆದಿದೆ.
ಅಲ್ಲದೆ, ತಾಮ್ರದ ಕಾಣಿಕೆ ಡಬ್ಬಿ ಮತ್ತು ಅದರಲ್ಲಿದ್ದ ಸುಮಾರು ಒಂದು ಸಾವಿರ ರೂ. ನಗದನ್ನು ಕಳವುಗೈಯಲಾಗಿದೆ. ಜು. 8ರ ಸಂಜೆಯಿಂದ ಜು.9ರ ಬೆಳಗ್ಗೆ 8 ಗಂಟೆಯ ಒಳಗೆ ಕಳವುಗೈಯಲಾಗಿದೆ ಎಂದು ಶಂಕಿಸಲಾಗಿದೆ. ಚಂದ್ರಹಾಸ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.