×
Ad

ಕಲ್ಲಡ್ಕದಲ್ಲಿ ಹಲ್ಲೆ ಪ್ರಕರಣ: ಆರೋಪಿ ಸೆರೆ

Update: 2018-07-10 22:45 IST

ಬಂಟ್ವಾಳ, ಜು. 11: ಕಲ್ಲಡ್ಕದಲ್ಲಿ ಚೇತನ್ ಎಂಬವರ ಮೇಲೆ ಜೂನ್ 11ರಂದು ನಡೆದ ಹಲ್ಲೆ, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರಕಾಶ್ ಆಚಾರ್ಯ ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಚೇತನ್ ರಿಗೆ ಆರೋಪಿಗಳಾದ ಕಿರಣ್, ಕೀರ್ತನ್, ಯೋಗಿಶ್, ಲೋಕೇಶ್, ಮೋಹನ್, ವಿಧ್ಯಾಧರ್, ಪ್ರಕಾಶ್ ಹಲ್ಲೆ ಮಾಡಿದ್ದಾಗಿ ದೂರಲಾಗಿತ್ತು. 

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕಿರಣ್, ಕೀರ್ತನ್‌, ಯೋಗಿಶ್ , ಲೊಕೇಶ್ , ಮೋಹನ್ ಪೂಜಾರಿ ಮತ್ತು ವಿಧ್ಯಾಧರ್ ಪೂಜಾರಿ ಯನ್ನು ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ. ಇದೀಗ ಪ್ರಕಾಶ್ ಬಂಧನದೊಂದಿಗೆ ಎಲ್ಲ ಆರೋಪಿಗಳನ್ನೂ ಬಂಧಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News