×
Ad

ನಾಡದೋಣಿಗಳಿಗಾಗಿ ಸೀಮೆಎಣ್ಣೆ ಪಂಪ್ ಸ್ಥಾಪನೆ: ಆಯುಕ್ತ

Update: 2018-07-10 23:04 IST

ಉಡುಪಿ, ಜು.10: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನಾಡ ದೋಣಿ ಮೀನುಗಾರರ ಸಮಸ್ಯೆಯಾದ ಸೀಮೆಎಣ್ಣೆ ಅಲಭ್ಯತೆಯ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಯುಕ್ತ ಪಂಕಜ್ ಕುಮಾರ ಪಾಂಡೆ ಜೊತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸುಧೀರ್ಘ ಚರ್ಚೆ ನಡೆಸಿದರು.

ಉಡುಪಿ ಜಿಲ್ಲೆಯಲ್ಲಿ ಸುಮಾರು 4445 ದೋಣಿಗಳಿಗೆ ಸೀಮೆಎಣ್ಣೆ ಪರ ವಾನಿಗೆ ಬೇಡಿಕೆ ಇದ್ದು, ಆದರೆ ಕೇವಲ 2610 ದೋಣಿಗಳಿಗೆ ಸೀಮೆಎಣ್ಣೆ ಪರವಾನಿಗೆ ನೀಡಲಾಗಿದೆ. ಉಳಿದ 1835 ದೋಣಿಗಳಿಗೆ ಸೀಮೆಎಣ್ಣೆ ಸಿಗುತ್ತಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು, ಸೀಮೆಎಣ್ಣೆ ನೀಡುವ ಬಗ್ಗೆ ಈ ಬಾರಿ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮೀನುಗಾರಿಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಬಾಕಿ ಉಳಿದ 1835 ದೋಣಿಗಳಿಗೆ ಸೀಮೆಎಣ್ಣೆ ಪೂರೈಸಲಾಗು ವುದು. ಅಲ್ಲದೇ ಮುಂದಿನ ದಿನಗಳಲ್ಲಿ ನಾಡದೋಣಿ ಮೀನುಗಾರರಿಗೆ ಮೀನು ಗಾರಿಕೆ ಇಲಾಖೆಯ ಮೂಲಕ ಸೀಮೆಎಣ್ಣಿ ಸರಬರಾಜು ಮಾಡಲಾಗುವುದು ಹಾಗೂ ಸೀಮೆಎಣ್ಣೆ ಪಂಪ್‌ಗಳ್ನು ಸ್ಥಾಪಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News