ಫಿಫಾ ವಿಶ್ವಕಪ್: ಫ್ರಾನ್ಸ್ ಫೈನಲ್‌ಗೆ

Update: 2018-07-11 03:18 GMT

ರಶ್ಯ, ಜು. 11: ಇಪ್ಪತ್ತು ವರ್ಷಗಳ ಬಳಿಕ ಫ್ರಾನ್ಸ್ ಮೊಟ್ಟಮೊದಲ ಬಾರಿಗೆ ಫಿಫಾ ವಿಶ್ವಕಪ್ ಫೈನಲ್ ತಲುಪಿದೆ. ಬೆಲ್ಜಿಯಂ ಅಬ್ಬರವನ್ನು 1-0 ಗೋಲುಗಳಿಂದ ಬಗ್ಗುಬಡಿದ ಫ್ರಾನ್ಸ್ ಶಿಸ್ತುಬದ್ಧ ಪ್ರದರ್ಶನದೊಂದಿಗೆ ಮನಸೂರೆಗೊಂಡಿತು.

ನೀಲಿ ಉಡುಗೆಗಳನ್ನು ತೊಟ್ಟ ಫ್ರಾನ್ಸ್ ಅಭಿಮಾನಿಗಳು ಮಂಗಳವಾರ ರಾತ್ರಿ ಪಿಟ್ಸ್‌ಬರ್ಗ್ ಅರೇನಾದಿಂದ ಫ್ರಾನ್ಸ್ ಧ್ವಜ ಬೀಸುತ್ತಾ ಆ್ಯಂಟೊನಿ ಗ್ರೀಸ್‌ಮನ್ ಅವರ ಹೆಸರು ಕೂಗಿ ಕೇಕೆ ಹಾಕಿ ಸಂಭ್ರಮಿಸುತ್ತಾ ಮೆಟ್ರೊ ಸ್ಟೇಷನ್‌ಗೆ ನಡೆದರು.

ಗ್ರೀಸ್‌ಮನ್ ಅವರು ಗಾಳಿಯಲ್ಲಿ ತೇಲಿಬಿಟ್ಟ ಚೆಂಡನ್ನು ಸಾಮ್ಯುಯೆಲ್ ಉಮ್ತಿತಿ, ಬುಲೆಟ್ ವೇಗದ ಹೆಡ್ಡರ್ ಮೂಲಕ ನೆಟ್ ಸೇರಿಸಿದರು. ಈ ಅದ್ಭುತ ಹೆಡ್ಡರ್ ಮರೋನ್ ಫೆಲ್ಲೈನಿಯವರ ಚಾಕಚಕ್ಯತೆಗೆ ಸವಾಲಾಗಿ ಗೋಲುಪೆಟ್ಟಿಗೆ ಸೇರಿತು. ಇದೀಗ ಮೂರನೇ ಸ್ಥಾನಕ್ಕಾಗಿ ರಶ್ಯದ ರಾಜಧಾನಿಯಲ್ಲಿ ನಡೆಯುವ ಪ್ಲೇ ಆಫ್ ಪಂದ್ಯಕ್ಕಾಗಿ ಬೆಲ್ಜಿಯಂ ಕಾಯಬೇಕಾಗಿದೆ.

ಫ್ರಾನ್ಸ್ ನಾಯಕ ಹ್ಯುಗೊ ಲೋರಿಸ್ ಅವರ ಕೌಶಲವನ್ನು ಪರೀಕ್ಷಿಸಿದ ಈಡನ್ ಹಝಾರ್ಡ್ ಹಾಗೂ ಕೆವಿನ್ ಡೆ ಬ್ರೂನ್ ವಿರಾಮದ ಬಳಿಕ ಚುರುಕು ಕಳೆದುಕೊಂಡರು. ಫ್ರಾನ್ಸ್ ನಾಯಕ ಮೊದಲಾರ್ಧದಲ್ಲಿ ಎರಡು ಬಾರಿ ಅದ್ಭುತವಾಗಿ ಚೆಂಡನ್ನು ತಡೆದು ತಮ್ಮ ದೇಶದ ಅಭಿಮಾನಿಗಳನ್ನು ಮುದಗೊಳಿಸಿದರು. ಹಿಂದಿನ ಪಂದ್ಯದಂತೆ ಆರಂಭಿಕ ನಿಮಿಷಗಳನ್ನು ಗೋಲು ಗಳಿಸಲಾಗದೇ ಬೆಲ್ಜಿಯಂನ ತಂತ್ರಗಾರಿಕೆ ಕೈಗೊಟ್ಟಿತು. ಗೊಲೊ ಕಂಟೆ, ಪಾಲ್ ಪೊಗಾ ಹಾಗೂ ಬ್ಲೈಸ್ ಮಟುಡಿ ಅವರಿದ್ದ ಮಿಡ್‌ಫೀಲ್ಡ್ ದುರ್ಬಲವಾದ್ದರಿಂದ ಪ್ಯಾರೀಸ್ ಓಟ ಸುಲಭವಾಯಿತು. ಗ್ರೀಸ್‌ಮನ್ ಬೆಲ್ಜಿಯಂ ಸವಾಲನ್ನು ಮೀರಿಸಿ ಎದುರಾಳಿಗಳನ್ನು ನಿಬ್ಬೆರಗಾಗಿಸಿದರು.

ದಕ್ಷಿಣ ಅಮೆರಿಕ ಅಭಿಮಾನಿಗಳು ಕೂಡಾ ಶಿಸ್ತು ಪ್ರದರ್ಶಿಸಿದರು. ಅಪರೂಪಕ್ಕೆ ವಿಶ್ವಕಪ್ ಸೆಮಿಫೈನಲ್ ತಲುಪಿದ್ದರಿಂದ ಆಗೊಮ್ಮೆ ಈಗೊಮ್ಮೆ ದೇಶದ ಧ್ವಜ ಬೀಸುವುದು ಹೊರತುಪಡಿಸಿದರೆ, ಹುಚ್ಚೆದ್ದು ಕುಣಿಯುವುದು, ಹಾಡು, ಬೊಬ್ಬೆ ಮಾಯವಾಗಿತ್ತು. ನಿರೀಕ್ಷೆಗೆ ವಿರುದ್ಧವಾಗಿ ಮೊದಲಾರ್ಧ ತೀರಾ ಸಪ್ಪೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News