ಮುದರಂಗಡಿ: ಯುಪಿಸಿಎಲ್‌ನಿಂದ ನಾಲ್ಕು ರಸ್ತೆಗಳ ನಿರ್ಮಾಣ

Update: 2018-07-11 12:28 GMT

ಪಡುಬಿದ್ರೆ, ಜು.11: ಅದಾನಿ ಯುಪಿಸಿಎಲ್‌ನ ಸಿಎಸ್‌ಆರ್ ಯೋಜನೆಯ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿಯ ಕಾರ್ಯಕ್ರಮದಡಿಯಲ್ಲಿ ಮುದರಂಗಡಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ವಿದ್ಯಾನಗರದಲ್ಲಿ 25.87 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಕಾಂಕ್ರೀಟಿಕರಣಗೊಳಿಸಿದ ನಾಲ್ಕು ರಸ್ತೆಗಳನ್ನು ಇಂದು ಉದ್ಘಾಟಿಸಲಾಯಿತು.

ರಸ್ತೆಯನ್ನು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಜಂಟಿಯಾಗಿ ಉದ್ಘಾಟಿಸಿದರು. ಕಿಶೋರ್ ಆಳ್ವ ಮಾತನಾಡಿ, ಅದಾನಿ ಯುಪಿಸಿಎಲ್ ಘೋಷಿಸಿದ ಸಿಎಸ್‌ಆರ್ ಅನುದಾನದಲ್ಲಿ ಮುದರಂಗಡಿ ಗ್ರಾಪಂಗೆ ಮೂರು ವರ್ಷದ ಅವಧಿಗೆ ಒಟ್ಟು 4.77 ಕೋಟಿ ರೂ. ಒಳಪಟ್ಟಿದ್ದು, 2016-17ರಿಂದ ಇಲ್ಲಿಯ ತನಕ ಪಂಚಾಯತ್ ನೀಡಿದ ಕ್ರಿಯಾಯೋಜನೆ ಪ್ರಕಾರ 1.13 ಕೋಟಿ ರೂ. ಮೊತ್ತದ 10 ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಸಂಪೂರ್ಣವಾಗಿನಿರ್ವ ಹಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಸದಸ್ಯರಾದ ಶೋಭಾ ಫೆರ್ನಾಂಡಿಸ್, ವಿನೋದಾ ಪೂಜಾರಿ, ಲೂಸಿ ಮಥಾಯಿಸ್, ಶಿವರಾಂ ಭಂಡಾರಿ, ಜೆಸ್ಸಿಲ್ಲಾ ಡಿಸೋಜ, ಸುಕುಮಾರ್ ಶೆಟ್ಟಿ, ಗ್ರಾಪಂ ಲೆಕ್ಕ ಸಹಾಯಕ ಶಿವರಾಂ, ಯುಪಿ ಸಿಎಲ್ ಸಂಸ್ಥೆಯ ಎಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪ ರವಿ ಆರ್. ಜೇರೆ, ಅದಾನಿ ಫೌಂಡೇಷನ್ ಸಂಸ್ಥೆಯ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News