ಜು.14: ಸಂಸದರ ಜೊತೆ ಬಾನುಲಿ ಫೋನ್‌ಇನ್ ಕಾರ್ಯಕ್ರಮ
Update: 2018-07-11 18:46 IST
ಮಂಗಳೂರು, ಜು.11: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ‘ಚಾವಡಿ ಮದಿಪು’ ತಿಂಗಳ ಕಾರ್ಯಕ್ರಮದಲ್ಲಿ ಜು.14ರಂದು ಬೆಳಗ್ಗೆ 10:30ಕ್ಕೆ ನಡೆಯಲಿರುವ ‘ನೇರ ಫೋನ್ ಇನ್’ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲು ಭಾಗವಹಿಸಲಿದ್ದಾರೆ.
ಕೇಂದ್ರ ಸರಕಾರವು ನಾಲ್ಕು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಆಸಕ್ತ ಕೇಳುಗರು ‘ಕೇಂದ್ರೊ ಸರಕಾರೊದ ನಾಲ್ ವರ್ಸೊದ ಅಭಿವೃದ್ಧಿದ ಪಜ್ಜೆಲು’ ಎಂಬ ವಿಷಯದ ಕುರಿತು ಸಂಸದರ ಜೊತೆ (0824-2211999 ಅಥವಾ ಮೊ.ಸಂ: 8277038000) ಸಂವಾದ ಮಾಡಬಹುದು. ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.