ಚೈತನ್ಯ ಪಬ್ಲಿಕ್ ಸ್ಕೂಲ್: ಶಿಕ್ಷಕ ರಕ್ಷಕ ಸಂಘದ ಸಭೆ
Update: 2018-07-11 19:13 IST
ಮಂಗಳೂರು, ಜು.11: ಚೈತನ್ಯ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಕೃಷ್ಣಾಪುರದಲ್ಲಿನ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಇಡ್ಯಾ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ವಾಹಕ ಸೂರಪಯ್ಯ ಕಾರ್ನಿಕ್ ಆಗಮಿಸಿದ್ದರು. ಪತ್ರಕರ್ತ ಜಯರಾಂ ಶ್ರೀಯಾನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಕೆ.ಎ. ಖಾದರ್, ಗೌರವಾಧ್ಯಕ್ಷ ಬಿ.ಎಂ. ಹುಸೈನ್, ಸಂಚಾಲಕ ಹನೀಫ್, ಕಾರ್ಯದರ್ಶಿ ಶೇಖ್ ಅಹ್ಮದ್, ಸದಸ್ಯರಾದ ಮುಹಮ್ಮದ್ ಅಲಿ, ಸುಪ್ರೀಂ ಮಯ್ಯದಿ, ದಿಲೀಪ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಕಮಲಾಕ್ಷಿ ಸ್ವಾಗತಿಸಿದರು. ಸಹಶಿಕ್ಷಕಿ ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ವಂದಿಸಿದರು.