ಅಕ್ರಮ ಸಾಗಾಟ: 9 ಜಾನುವಾರು ವಶಕ್ಕೆ

Update: 2018-07-11 16:28 GMT

ಕೋಟ, ಜು.11: ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಕೋಟ ಪೊಲೀಸರು ಹೊಂಬಾಡಿ ಮಂಡಾಡಿ ಗ್ರಾಮದ ಹುಣಸೇಮಕ್ಕಿ ಬಿದ್ಕಲ್ಕಟ್ಟೆ ರಸ್ತೆಯಲ್ಲಿ ಜು.11ರಂದು ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರ ಕಾರ್ಯಾಚರಣೆ ವೇಳೆ ಬಿದ್ಕಲ್ಕಟ್ಟೆ ಕಡೆಯಿಂದ ಹುಣಸೇಮಕ್ಕಿ ಕಡೆಗೆ ಬರುತ್ತಿದ್ದ ಪಿಕ್‌ಅಪ್ ವಾಹನವನ್ನು ಚಾಲಕ ಹಾಗೂ ಇನ್ನೋರ್ವ ನಿಲ್ಲಿಸಿ ಓಡಿ ಹೋಗಿದ್ದಾರೆ. ವಾಹನದಲ್ಲಿದ್ದ 9 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡರು. ಇದರಲ್ಲಿ ಒಂದು ಎಮ್ಮೆ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ಜಾನುವಾರುಗಳ ಒಟ್ಟು ಮೌಲ್ಯ 35,000ರೂ. ಹಾಗೂ ಬೊಲೆರೋ ಪಿಕ್‌ಅಪ್ ವಾಹನದ ಮೌಲ್ಯ 5,00,000 ರೂ. ಎಂದು ಅಂದಾಜಿಸಲಾಗಿದೆ. ಗೋಳಿಯಂಗಡಿ ಹುಸೇನ್ ಹಾಗೂ ವಾಹನದ ಮಾಲಕರು ಜೊತೆಯಾಗಿ ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News