ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್

Update: 2018-07-11 16:40 GMT

ಮಂಗಳೂರು, ಜು.11: ಇಲ್ಲಿನ ಬಂಗ್ಲಗುಡ್ಡೆ ಸೈಟ್‌ನ ಬದ್ರಿಯಾ ಜುಮಾ ಮಸೀದಿಯ 2018-19ರ ಸಾಲಿನ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಎಸ್.ಎನ್.ಎಸ್. ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಮೆಟ್ರೋ ಶಾಹುಲ್ ಹಮೀದ್ ಹಾಜಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯೂಸುಫ್ ಎಂ.ಎಸ್., ದಾವೂದ್ ಸೈಟ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಸೈಟ್, ಜೊತೆಕಾರ್ಯದರ್ಶಿಯಾಗಿ ಇಬ್ರಾಹೀಂ ಭಾತಿಷ, ಇಕ್ಬಾಲ್ ಸೈಟ್ ಆಯ್ಕೆಯಾದರು.

ಖಜಾಂಜಿಯಾಗಿ ಎನ್.ಎಸ್. ಅಬ್ದುರ್ರಹ್ಮಾನ್ ಆಯ್ಕೆಯಾಗಿದ್ದಾರೆ. ಶೇಖಬ್ಬ ಬಯಲು ಪೇಟೆ, ಉಸೈನಾಕಾ ಜೆ.., ಹಮೀದ್ ಫಿಶ್, ಅಬುಸಾಲಿ, ಹನೀಫ್, ಸುಲೈಮಾನ್, ಹಮೀದ್ ಪೈಂಟರ್, ಮುಬಾರಕ್, ಪಿ.ಎಚ್. ಹಕೀಂ ಸದಸ್ಯರಾಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News