ಮಟ್ಕಾ ಆಡುತ್ತಿದ್ದ ಇಬ್ಬರ ಬಂಧನ

Update: 2018-07-11 17:06 GMT

ಮಂಗಳೂರು, ಜು.11: ಮಟ್ಕಾ ಆಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಮೂಡುಶೆಡ್ಡೆ ಸಮೀಪ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಜಾಲ್ ನಿವಾಸಿ ಉಮೇಶ್(54), ಮೂಡುಶೆಡ್ಡೆ ನಿವಾಸಿ ಹರಿಪ್ರಸಾದ್(29) ಗುರುತಿಸಲಾಗಿದ್ದು, ಬಂಧಿತರಿಂದ 2,200 ರೂ. ನಗದು ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News