ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಪದಗ್ರಹಣ

Update: 2018-07-12 13:16 GMT

ಮೂಡುಬಿದಿರೆ, ಜು.12: ನಮ್ಮ ವ್ಯಕ್ತಿತ್ವವು ಯಾರಿಂದ ಸ್ಪೂರ್ತಿ ಪಡೆಯಲ್ಪಟ್ಟಿದೆ ಎಂಬುದರ ಮೇಲೆ ರೂಪುಗೊಳ್ಳುತ್ತದೆ. ಸ್ಪೂರ್ತಿಯ ವ್ಯಕ್ತಿತ್ವ ರೂಪುಗೊಂಡಾಗ ನಾವು ಇತರರಿಗೆ ಸ್ಪೂರ್ತಿಯಾಗಲು ಸಾಧ್ಯ. ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ನಾವು ಸ್ಪೂರ್ತಿಯ ಸೆಲೆಯಾಗೋಣ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. 

ರೋಟರಿ ಸಮ್ಮಿಲನ್ ಹಾಲ್‍ನಲ್ಲಿ ಬುಧವಾರ ರಾತ್ರಿ ನಡೆದ ರೋಟರಿ ಕ್ಲಬ್ ಮೂಡಬಿದಿರೆ ಟೆಂಪಲ್ ಟೌನ್ ಐದನೇ ವರ್ಷದ ಅಧ್ಯಕ್ಷರಾಗಿ ರೋಟರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಡಿ'ಕೋಸ್ತ  ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. 

ರೋಟರಿ ಝೋನಲ್ ಲೆಫ್ಟಿನೆಂಟ್ ಡಾ,ಸಧೀರ್ ಪ್ರಭು ಅವರು ಕ್ಲಬ್‍ನ ಬುಲೆಟಿನ್ `ರೋಟೌನ್' ಬಿಡುಗಡೆಗೊಳಿಸಿದರು.
ರೋಟರಿ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಐವರು ಪುರುಷರು, ಐವರು ಮಹಿಳೆಯರನ್ನು ಹೊಸ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದರು. ಸಿಎ ಉಮೇಶ್ ರಾವ್ ಮಿಜಾರ್ ಹೊಸ ಸದಸ್ಯರ ಪರಿಚಯ ನೀಡಿದರು. 

ಜಿಎಸ್‍ಆರ್ ಡಾ.ಹರೀಶ್ ನಾಯಕ್, ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ  ಮಾತನಾಡಿ ಶುಭ ಹಾರೈಸಿದರು. ನೂತನ ಅಧ್ಯಕ್ಷ ವಿನ್ಸೆಂಟ್ ಡಿ'ಕೋಸ್ತ ಮುಂದಿನ ವರ್ಷದ ಕಾರ್ಯಚಟುವಟಿಕೆಗಳ ಕುರಿತು ವಿವರ ನೀಡಿದರು.

ಸೇವಾ ಚಟುವಟಿಕೆ: ಸೋಹಂ ಪವರ್ ಪ್ರೋಜೆಕ್ಟ್ ಸಹಭಾಗಿತ್ವದಲ್ಲಿ ಮೂಡುಬಿದಿರೆ ಪರಿಸರದ ಸರಕಾರಿ ಶಾಲೆಗಳ 2,500 ಮಂದಿ ವಿದ್ಯಾರ್ಥಿಗಳಿಗೆ `ಚೈಲ್ಡ್ ಇನ್ಶೂರೆನ್ಸ್ ಪಾಲಿಸಿ', ಸಂಪಿಗೆಯ ಪುಟಾಣಿ ಗಾಯತ್ರಿಗೆ ವೀಲ್‍ಚೇರ್, ರೋಟರಿ ಜಿಲ್ಲಾ  ಯೋಜನೆಯನ್ವಯ ಕಡಲಕೆರೆ ಶಾಲೆಯ ಆವರಣದಲ್ಲಿರುವ ಪ್ರೇರಣಾ ಶಿಶುಮಂದಿರಕ್ಕೆ  ಆಟದ ಪರಿಕರ (ಸ್ಲೈಡರ್),  ಗಾಂ„ನಗರ ಶಾಲಾ ಗೌರವ ಶಿಕ್ಷಕಿಗೆ ಪ್ರೋತ್ಸಾಹ ವೇತನ, ಕಡಲಕೆರೆ, ಕಲ್ಲಮುಂಡ್ಕೂರು, ಹೊಕ್ಕಾಡಿಗೋಳಿ, ಜ್ಯೋತಿನಗರ ಶಾಲೆಗಳಿಗೆ ಪುಸ್ತಕ, ಡಿಜೆ ಶಾಲಾ ಮಕ್ಕಳಿಗೆ ಸಮವಸ್ತ್ರ, ರೋಟರಿ ಶಾಲೆ ಮತ್ತು  ಪ.ಪೂ. ಕಾಲೇಜಿಗೆ  ತಲಾ ಒಂದು  ಧ್ವನಿವರ್ಧಕ ಕೊಡುಗೆಯಾಗಿ ನೀಡಲಾಯಿತು. 

ನಿರ್ಗಮನ ಅಧ್ಯಕ್ಷ ಬಲರಾಮ್ ಕೆ.ಎಸ್. ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಆಜಯ್ ಗ್ಲೆನ್ ಡಿಸೋಜ ವರದಿ ವಾಚಿಸಿದರು.  ನೂತನ ಕಾರ್ಯದರ್ಶಿ ಡೆನಿಸ್ ಪಿರೇರಾ ವಂದಿಸಿದರು. ನಮ್ರತಾ ಶ್ಯಾನುಭಾಗ್ ಮತ್ತು ಡಾ. ಆಮರ್‍ದೀಪ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News