×
Ad

ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ವತಿಯಿಂದ ಹಜ್ ತರಬೇತಿ ಶಿಬಿರ

Update: 2018-07-12 19:03 IST

ಮಂಗಳೂರು : ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವನ್ನು ಜುಲೈ 15 ರವಿವಾರ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರವರೆಗೆ ಮಂಗಳೂರಿನ ಸ್ಟೇಟ್‍ಬ್ಯಾಂಕ್ ನೆಲ್ಲಿಕಾಯಿ ರಸ್ತೆಯ, ಮಸ್ಜಿದ್ ಇಬ್ರಾಹಿಂ ಅಲ್ ಖಲೀಲ್ ಸಮೀಪ ಇರುವ ಪೋಲಿಮಾರ್ ಹೌಸ್ ಇದರ ಒಂದನೇ ಮಹಡಿಯ 'ದಾರುಲ್ ಖೈರ್' ನಲ್ಲಿ ಏರ್ಪಡಿಸಲಾಗಿದೆ.

ಸಲಫಿ ಎಜುಕೇಶನ್ ಬೋರ್ಡ್ ಇದರ ಅಧ್ಯಕ್ಷರಾದ ಉಸ್ತಾದ್ ಮುಸ್ತಫಾ ದಾರಿಮಿ ಇವರು ಹಜ್ಜ್ ಹಾಗೂ ಉಮ್ರದ ವಿಧಾನವನ್ನು ಪ್ರಾಯೋಗಿಕವಾಗಿ, ಬ್ಯಾರಿ ಭಾಷೆಯಲ್ಲಿ ವಿವರಿಸುವರು, ಹಾಗೂ ವೀಡಿಯೊವನ್ನು ಪ್ರದರ್ಶಿಸಲಾಗುವುದು ಎಂದು ಪ್ರಕಟನೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News