×
Ad

ಕಡಿಯಾಳಿ; ರಂಗ ತರಬೇತಿ - ಆಸಕ್ತರಿಂದ ಅರ್ಜಿ ಆಹ್ವಾನ

Update: 2018-07-12 19:07 IST

ಉಡುಪಿ, ಜು.12: ಕಡಿಯಾಳಿಯ ‘ಭರತಾಂಜಲಿ’ ಸಂಸ್ಥೆಯು ಆಸಕ್ತರಿಗೆ ರಂಗ ತರಬೇತಿ ನೀಡಲು ಮುಂದಾಗಿದ್ದು, ಹೆಸರಾಂತ ರಂಗಭೂಮಿ ಕಲಾವಿದರಿಂದ ಕಲಿಕೆಯ ಅವಕಾಶ ಒದಗಿಸಲಿದೆ. ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಆಸಕ್ತರರಿಗೆ ರಂಗ ತರಬೇತಿ ಪಡೆಯಲು ಅವಕಾಶ ನೀಡಲಾಗುವುದು. ಮೊದಲ ಬ್ಯಾಚ್ ಮುಂದಿನ ಆಗಸ್ಟ್ ತಿಂಗಳಿನಿಂದ ಪ್ರಾರಂಭಗೊಳ್ಳಲಿದೆ.

ಪ್ರತಿ ಶುಕ್ರವಾರ ಮತ್ತು ಶನಿವಾರ ಸಂಜೆ 5:30ರಿಂದ 7:30ವರೆಗೆ ಕಡಿಯಾಳಿ ಯಲ್ಲಿರುವ ಭರತಾಂಜಲಿಯಲ್ಲಿ ತರಬೇತಿ ನೀಡಲಾಗುತ್ತದೆ. ಮೂರು ತಿಂಗಳ ಕೋರ್ಸ್ ಇದಾಗಿದ್ದು, ಸೀಮಿತ ಸೀಟುಗಳು ಇರುವುದರಿಂದ ಆಸಕ್ತ ಅಭ್ಯರ್ಥಿಗಳು ಕೂಡಲೆ ಆಯೋಜಕರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಯೋಜಕರಾದ ರೇವತಿ ನಾಡಗೀರ ಇವರನ್ನು (ಮೊಬೈಲ್: 8762563517) ಸಂಪರ್ಕಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News