ಉಡುಪಿ ಗ್ಯಾರೇಜು ಮಾಲಕರ ಸಂಘದಿಂದ ಅಸಂಘಟಿತ ಕಾರ್ಮಿಕರ ನೋಂದಣಿ ಶಿಬಿರ
ಉಡುಪಿ, ಜು.12: ದಕ್ಷಿಣ ಕನ್ನಡ ಮತ್ತು ಉಡುಪಿ ಗ್ಯಾರೇಜು ಮಾಲಕರ ಸಂಘದ ಉಡುಪಿ ವಲಯ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಜು.15ರ ರವಿವಾರ ಬೆಳಗ್ಗೆ 8:30ರಿಂದ ಅಪರಾಹ್ನ 1:00ರವರೆಗೆ ಉಡುಪಿ ಮಿಶನ್ ಕಂಪೌಂಡ್‌ನ ಜಗನ್ನಾಥ ಸಭಾಭವನದಲ್ಲಿ ಗ್ಯಾರೇಜು ಮಾಲಕರು ಮತ್ತು ಗ್ಯಾರೇಜು ಕಾರ್ಮಿಕರಿಗಾಗಿ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಶೈಕ್ಷಣಿಕ, ವೈದ್ಯಕೀಯ, ಪಿಂಚಣಿ,ವಿಮಾ ಸೌಲಭ್ಯ ಇತ್ಯಾದಿಗಳನ್ನು ಅಳವಡಿಸಲು ಸ್ಮಾರ್ಟ್ ಕಾರ್ಡ್ ನೀಡುವ ಚಿಂತನೆ ಸರಕಾರದಿಂದ ನಡೆದಿದ್ದು, ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ನಮೂನೆ 1ನ್ನು ಭರ್ತಿ ಮಾಡಿ ಶಿಬಿರ ದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಸಕ್ತರು ತಮ್ಮ ಜನ್ಮದಿನದ ದಾಖಲೆ, ಆಧಾರ್, ಪಡಿತರ, ಬ್ಯಾಂಕ್ ಖಾತೆ ವಿವರಗಳ ಪ್ರತಿ ಮತ್ತು ಒಂದು ಭಾವಚಿತ್ರವನ್ನು ತರುವಂತೆ ಸಂಘದ ಅಧ್ಯಕ್ಷ ಪ್ರಭಾಕರ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಮೊಬೈಲ್: 9448445494, 9242879786ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.