ಸುಗಮ ಸಂಗೀತ ಗೀತಗಾಯನ ಸೆಮಿಫೈನಲ್ ಸ್ಪರ್ಧೆ

Update: 2018-07-12 13:46 GMT

ಉಡುಪಿ, ಜು.12: ಕಟಪಾಡಿ ದಿಶಾ ಕಮ್ಯೂನಿಕಷನ್ಸ್ ಟ್ರಸ್ಟ್, ಕಲಾನಿಧಿ ಸಾಂಸ್ಕೃತಿಕ ಕಲಾಪ್ರಕಾರಗಳ ಸಂಸ್ಥೆ, ರಾಗವಾಹಿನಿ ಉಡುಪಿ, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ‘ನನ್ನ ಹಾಡು ನನ್ನದು’ ಸೀಸನ್-2 ಸುಗಮ ಸಂಗೀತ ಗೀತಗಾಯನದ ಸೆಮಿಫೈನಲ್ ಸ್ಪರ್ಧೆಯ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ಉಡುಪಿ ನಾದವೈಭವಂ ವಾಸುದೇವ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ರೋಟರಿ ಜಿಲ್ಲಾ ಮಾಜಿ ಗವರ್ನರ್ ಬಿ.ಪುಂಡಲೀಕ ಮರಾಠೆ ಮುಖ್ಯ ಅತಿಥಿಗಳಾಗಿದ್ದರು.

ಸೆಮಿಫೈನಲ್ ಸ್ಪರ್ಧೆಯಲ್ಲಿ ಡಿ.ಎಸ್.ಸೀತಾಪ್ರಜ್ಞಾ ಕುಂಜಿಬೆಟ್ಟು, ದೀಪಿಕಾ ಬಲ್ಲಾಳ್ ಚಿತ್ಪಾಡಿ, ಜನಾರ್ದನ ಕುಂಭಾಶಿ, ಮಧುಶ್ರೀ ಕಿದಿಯೂರು, ಪ್ರಜ್ಞಾ ಎಸ್.ಆಚಾರ್ಯ ಕುಳಾಯಿ, ಶ್ರೀಹರಿ ವಿ.ಪಿ ಕುಂದಾಪುರ, ಸುಮನ ಪಿ. ಮೂಡುಬಿದ್ರಿ, ಸುಷ್ಮಾ ಎಸ್. ಭಟ್ ಕಟಪಾಡಿ, ತನುಶ್ರೀ ಕುಕ್ಕುಂದೂರು, ವಿಜಯಲಕ್ಷ್ಮೀ ಕುಂದಾಪುರ, ಪ್ರಸನ್ನ ರಾಮಕೃಷ್ಣ ಭಟ್ ಸಾಲಿಗ್ರಾಮ ಉತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಆಯ್ಕೆಯಾದರು.

ಸೆಮಿಫೈನಲ್ ಸ್ಪರ್ಧೆಯ ತೀರ್ಪುಗಾರರಾಗಿ ಸಖಾರಾಮ ಮಾಸ್ಟರ್ ಹಾವಂಜೆ, ರಾಧಾಕೃಷ್ಣ ಭಟ್ ಉಡುಪಿ, ಸುದರ್ಶನ್ ಮಲ್ಪೆ ಕಾರ್ಯ ನಿರ್ವಹಿಸಿದರು. ಯಶಸ್ ಪಿ.ಸುವರ್ಣ, ಶಂಕರ್‌ದಾಸ್ ಚೇಂಡ್ಕಳ, ವಿನಯ ಹಾವಂಜೆ, ಜಯಲಕ್ಷ್ಮೀ ಉಡುಪಿ, ಪ್ರಣಮ್ಯ ರಾವ್ ಉಪಸ್ಥಿತರಿದ್ದರು.

ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ರಾಗವಾಹಿನಿ ಸಂಸ್ಥೆಯ ಅಧ್ಯಕ್ಷ ರೋಹಿತ್ ಕುಮಾರ್ ಮಲ್ಪೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News