×
Ad

ರಾಜಕೀಯ ಪಕ್ಷಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸಮಾನ ಹಕ್ಕುಗಳಿರಬೇಕು: ಬಿಜೆಪಿ

Update: 2018-07-12 19:28 IST

ಜೈಪುರ,ಜು.12: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಮಾಜದಲ್ಲಿ ಮಾತ್ರವಲ್ಲ,ರಾಜಕೀಯ ಪಕ್ಷಗಳಲ್ಲೂ ಸಮಾನ ಹಕ್ಕುಗಳಿರಬೇಕು ಎಂದು ಹೇಳುವ ಮೂಲಕ ಬಿಜೆಪಿ ಈ ಸಮುದಾಯಗಳ ಓಲೈಕೆಗೆ ಮುಂದಾಗಿದೆ.

 ಬುಧವಾರ ಇಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ಕಾರ್ಯಾಗಾರದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ವಿ.ಸತೀಶ್ ಅವರು,ಬುಡಕಟ್ಟು ಸಮುದಾಯ ಕುರಿತು ಪಕ್ಷದ ಚಿಂತನೆ ಸದಾ ಧನಾತ್ಮಕ ಮತ್ತು ಅರ್ಥಪೂರ್ಣವಾಗಿದೆ. ಅರ್ಹತೆಯ ಆಧಾರದಲ್ಲಿ ಪಕ್ಷವು ಎಲ್ಲ ಸಮುದಾಯಗಳಿಗೂ ಗೌರವ ನೀಡುತ್ತದೆ ಎಂದು ಒತ್ತಿ ಹೇಳಿದರು.

ಪಕ್ಷದ ‘ಮೇರಾ ಬೂತ್-ಕಮಾಲ್ ಕಾ ಬೂತ್’ ಕಾರ್ಯಕ್ರಮದಡಿ ಬಿಜೆಪಿಯ ಸಿದ್ಧಾಂತವನ್ನು ಪ್ರತಿ ಕುಟುಂಬಕ್ಕೂ ತಲುಪಿಸುವಂತೆ ಕಾರ್ಯಕರ್ತರಿಗೆ ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News