ಜು.15: ಅಸೈಗೋಳಿಯಲ್ಲಿ ‘ಪೆರ್ನಾಲ್ ಸಂದೋಲ’ ಕಾರ್ಯಕ್ರಮ

Update: 2018-07-12 14:06 GMT

ಮಂಗಳೂರು, ಜು.12: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ ‘ಮೇಲ್ತೆನೆ’ ಸಂಘಟನೆಯ ಸಹಕಾರದೊಂದಿಗೆ ಜು.15ರಂದು ಬೆಳಗ್ಗೆ 9ಕ್ಕೆ ಅಸೈಗೋಳಿಯ ಲಯನ್ಸ್ ಸೇವಾ ಸದನದಲ್ಲಿ ‘ಪೆರ್ನಾಲ್ ಸಂದೋಲ 2018’ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಅಲಿ, ಮೇಲ್ತೆನೆಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಬ್ಯಾರಿ ಭಾಷೆಯಲ್ಲಿ ಕವನ ರಚನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕವನ ರಚನೆಗೆ ಸಂಬಂಧಿಸಿ ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು. ಸಾರ್ವಜನಿಕರಿಗೆ ಮುಕ್ತವಾಗಿರುವ ಈ ಸ್ಪರ್ಧೆಯಲ್ಲಿ ಮೂವರು ವಿಜೇತರಿಗೆ ಕವಿಗೋಷ್ಠಿಯಲ್ಲಿ ವಾಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಕವಿ ಶಂಸುದ್ದೀನ್ ಮಡಿಕೇರಿಯ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಆಲಿಕುಂಞಿ ಪಾರೆ, ಶರೀಫ್ ನಿರ್ಮುಂಜೆ, ಅಶ್ರಫ್ ಅಪೋಲೊ, ಮನ್ಸೂರ್ ಅಹ್ಮದ್ ಸಾಮಣಿಗೆ, ಮಿಸ್ರಿಯಾ ಪಜೀರ್, ಆಯಿಶಾ ಯು.ಕೆ., ಸೈಫ್ ಕುತ್ತಾರ್, ಶಮೀಮ್ ಕುಟ್ಟಿಕ್ಕಳ, ಅಬ್ದುಲ್ಲಾ ಮಡಿಕೇರಿ, ಹಂಝ ಮಲಾರ್ ಕವನ ವಾಚಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News