×
Ad

ಅಗ್ರಿಗೋಲ್ಡ್ ಸಂತ್ರಸ್ತ ಗ್ರಾಹಕರ ಸಮಾವೇಶಕ್ಕೆ ಆಂಡಾಳ್ ರಮೇಶ್ ಬಾಬು

Update: 2018-07-12 19:41 IST

ಮಂಗಳೂರು:ಜು.13:ಆಂಧ್ರಪ್ರದೇಶದ ಉಚ್ಛ ನ್ಯಾಯಾಲಯದಲ್ಲಿ ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಪ್ರತಿನಿಧಿಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಿ ಕಾನೂನು ಹೋರಾಟದಲ್ಲಿ ತೊಡಗಿರುವ ಆಂಡಾಳ್ ರಮೇಶ್ ಬಾಬು ನಗರಕ್ಕೆ ಆಗಮಿಸಲಿದ್ದಾರೆ.

ಜು.14ರಂದು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ (ಮಿನಿ ವಿಧಾನ ಸೌಧದ ಬಳಿ) ಹಮ್ಮಿಕೊಂಡಿರುವ ಅಗ್ರಿ ಗೋಲ್ಡ್ ನಿಂದ ವಂಚನೆಗೊಳಗಾಗಿರುವ ಗ್ರಾಹಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಂಚಿತ ಗ್ರಾಹಕ ಪ್ರತಿನಿಧಿಗಳ ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News