ಶಾಲೆ ಬಳಿ ಮದ್ಯದಂಗಡಿ ಆರಂಭಕ್ಕೆ ವಿರೋಧ: ಡಿವೈಎಫ್‌ಐನಿಂದ ಜಿಲ್ಲಾಧಿಕಾರಿಗೆ ಮನವಿ

Update: 2018-07-12 14:15 GMT

ಮಂಗಳೂರು, ಜು.12: ತಾಲೂಕಿನ ಕುತ್ತಾರ್‌ಪದವು ಜಂಕ್ಷನ್‌ನಲ್ಲಿ ಸರಕಾರಿ ಶಾಲೆಯ ಸಮೀಪದಲ್ಲಿ ನಿಯಮ ಮೀರಿ ಮದ್ಯದಂಗಡಿ ತೆರೆಯುತ್ತಿದ್ದು, ಮದ್ಯದಂಗಡಿಯ ಪರವಾನಿಗೆ ರದ್ದುಗೊಳಿಸಲು ಜಿಲ್ಲಾಧಿಕಾರಿಗೆ ಡಿವೈಎಫ್‌ಐ ಮನವಿ ಸಲ್ಲಿಸಿ ಆಗ್ರಹಿಸಿದೆ.

ಮದ್ಯದಂಗಡಿಯ ಪರವಾನಿಗೆಯನ್ನು ರದ್ದುಗೊಳಿಸಬೇಕು. ಶಾಲಾ ಆವರಣದಿಂದ ನೂರು ಮೀಟರ್ ಒಳಗಡೆ ಯಾವುದೇ ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂಬ ನಿಯಮವಿದ್ದರೂ ಅಕ್ರಮವಾಗಿ ಎನ್‌ಒಸಿ ಕೊಟ್ಟಿರುವ ಪಂಚಾಯತ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಡಿವೈಎಫ್‌ಐ ಎಚ್ಚರಿಸಿದೆ.

ನಿಯೋಗದ ನೇತೃತ್ವವನ್ನು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಜೊತೆ ಕಾರ್ಯದರ್ಶಿ ನಿತಿನ್ ಕುತ್ತಾರ್, ಮುಖಂಡರಾದ ಸುನೀಲ್ ತೇವುಲ, ಕಾರ್ಥಿಕ್ ದೇಸೋಡಿ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News