×
Ad

ಜು.14ರಂದು ಹೆಬ್ರಿಯಲ್ಲಿ ಮೊದಲ ಕವಿ ಕಾವ್ಯ ಸಂಭ್ರಮ

Update: 2018-07-12 20:02 IST

ಹೆಬ್ರಿ, ಜು.12: ಹೆಬ್ರಿ ತಾಲೂಕಿನ ಪ್ರಥಮ ಕವಿ ಕಾವ್ಯ ಸಂಭ್ರಮ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜು.14ರಂದು ನಡೆಯಲಿದೆ. ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಎಚ್. ಬಾಸ್ಕರ ಜೋಯಿಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಎಂದು ಸಂಯೋಜಕ ಶೇಖರ ಅಜೆಕಾರು ತಿಳಿಸಿದ್ದಾರೆ.

ಸಂಸ್ಥೆ ಅಧ್ಯಕ್ಷ ನಾಗರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸ್ವಪ್ನ ಎನ್ ಶೆಟ್ಟಿ, ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಸರಗೋಡು ಅತಿಥಿಗಳಾಗಿರುವರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಎಸ್ ಆರ್ ಶಿಕ್ಷಣ ಸಮೂಹ ಸಂಸ್ಥೆ, ಸಂಸ್ಥೆಯ ಕನ್ನಡ ಸಾಹಿತ್ಯ ಸಂಘ ಹಾಗೂ ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕವಿ ಕಾವ್ಯ ಸಂಭ್ರಮದಲ್ಲಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಅರುಣಾ ಹೆಬ್ರಿ,  ಪ್ರೇಮಾ ವಿ. ಸೂರಿಗ ಅಜೆಕಾರು, ಬಾಲಕೃಷ್ಣ ಹೆಗ್ಡೆ ಅಜೆಕಾರು, ಸುಮತಿ ಪ್ರಭು ಅಂಡಾರು, ಅಶ್ವಿನಿ ಉಗ್ರಾಣಿಕಟ್ಟೆ, ದೀಪಕ್ ದುರ್ಗಾ,ಅವನಿ ಉಪಾಧ್ಯ ಕಾರ್ಕಳ, ಪ್ರಮೀಳಾ ಶೆಟ್ಟಿ ಸೋಮೇಶ್ವರ, ಸತೀಶ ಆರ್. ಆಚಾರ್ಯ ವರಂಗ, ಸಹನಾ ಮೂಡುಕೊಣಾಜೆ, ನಾಗಶ್ರೀ ನಾಗರಕಟ್ಟೆ ಮೊದಲಾದ ಉದಯೋನ್ಮುಖ ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News