×
Ad

ಪಡುಬಿದ್ರಿ : ಸುಝ್ಲಾನ್ ಕಂಪೆನಿ ತಾತ್ಕಾಲಿಕ ಸ್ಥಗಿತ

Update: 2018-07-12 22:45 IST

ಪಡುಬಿದ್ರಿ,ಜು.12: ಪಡುಬಿದ್ರಿಯಲ್ಲಿ ಕಾರ್ಯಚರಿಸುತ್ತಿರುವ ಸುಜ್ಲಾನ್ ಇನ್‍ಫ್ರಾಸ್ಟ್ರಕ್ಚರ್ ಘಟಕ ಜುಲೈ 1 ರಿಂದ ಉತ್ಪಾದನೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ.

ಗಾಳಿಯಂತ್ರದ ಬಿಡಿಭಾಗಗಳನ್ನು ತಯಾರಿಸುವ ಈ ಘಟಕದಲ್ಲಿ ಕಳೆದ ಕೆಲವು ತಿಂಗಳಿಂದ ಮಾರುಕಟ್ಟೆ ಕುಸಿತದ ಪರಿಣಾಮ ಎರಡು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. 

ಕಂಪೆನಿ ಕಾರ್ಮಿಕರಿಗೆ ಎರಡು ತಿಂಗಳ ವೇತನ ನೀಡಿ ರಜೆಯಲ್ಲಿ ಕಳುಹಿಸಲಾಗಿದೆ. ಆದರೆ ಗುತ್ತಿಗೆ ಕಾರ್ಮಿಕರು ರಜಾ ವೇತನವಿಲ್ಲದೆ ತೊಂದರೆಗೀಡಾಗುತ್ತಿದ್ದಾರೆ.
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News