ಮಂಗಳೂರು: ‘ಇಮೇಜ್’ ಹಿಜಾಮ ಕ್ಲಿನಿಕ್ ಶುಭಾರಂಭ
ಮಂಗಳೂರು, ಜು.13: ನಗರದ ಅತ್ತಾವರದ ಪ್ರಿಸೀಡಿಯಂ ಕಾಂಪ್ಲೆಕ್ಸ್‌ನಲ್ಲಿ ‘ಇಮೇಜ್’ ಹಿಜಾಮ ಕ್ಲಿನಿಕ್ ಅನ್ನು ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಆರೋಗ್ಯದ ಹಿತದೃಷ್ಟಿಯಿಂದ ಜನರು ಇದರ ಸೌಲಭ್ಯ ಪಡೆದುಕೊಳ್ಳುವುದು ಒಳಿತು. ಮುಂದಿನ ದಿನಗಳಲ್ಲಿ ‘ಇಮೇಜ್’ ನಗರದ ವಿವಿಧೆಡೆ ಮತ್ತಷ್ಟು ಕ್ಲಿನಿಕ್‌ಗಳನ್ನು ತೆರೆಯಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್ಮಾನ್ ಶುಭ ಹಾರೈಸಿದರು. ಹಿಜಾಮ ಕ್ಲಿನಿಕ್‌ನ ವೈದ್ಯ ಡಾ. ಅಬ್ದುಲ್ ಬಾಶಿತ್ ಮಾತನಾಡಿ ಮಂಗಳೂರಿನಲ್ಲಿ ಸಾಕಷ್ಟು ಹಿಜಾಮ ಕ್ಲಿನಿಕ್‌ಗಳಿವೆ. ಆದರೆ, ಇಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭ ಉದ್ಯಮಿ ಎನ್ ಮಾರ್ಕ್ ಬಿಲ್ಡರ್ ನೂರುಲ್ಲಾ, ಪ್ಲಾಸ್ಟಿಕ್ ಲ್ಯಾಂಡ್‌ನ ಬಶೀರ್, ಫ್ರೂಟ್ಸ್ ಮರ್ಚಂಟ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು. ಹಿಜಾಮ ಕ್ಲಿನಿಕ್‌ನ ಮಾಲಕ ಅಬೂಬಕರ್ ಸಿದ್ದೀಕ್ ಸ್ವಾಗತಿಸಿದರು.