ಜು.14ರಂದು ಬ್ರಹ್ಮಾವರದಲ್ಲಿ ‘ಶಿಕ್ಷಣ ಮತ್ತು ಶಾಂತಿ’ ಸಮಾವೇಶ
Update: 2018-07-13 20:00 IST
ಉಡುಪಿ, ಜು.13: ಉಡುಪಿ ದಾರುಲ್ ಹುದಾ ಗೈಡೆನ್ಸ್ ಸೆಂಟರ್ ವತಿ ಯಿಂದ ಶಿಕ್ಷಣ ಮತ್ತು ಶಾಂತಿ ಎಂಬ ಶೀರ್ಷಿಕೆ ಅಡಿಯಲ್ಲಿ ಸಮಾವೇಶ ಹಾಗೂ ರಕ್ತದಾನ ಶಿಬಿರವನ್ನು ಜು.14ರಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30 ರವರೆಗೆ ಬ್ರಹ್ಮಾವರದ ಮದರ್ ಪ್ಯಾಲೇಸ್ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳ ಲಾಗಿದೆ.
ಮುಖ್ಯ ಅತಿಥಿಯಾಗಿ ಮದೀನಾ ಯುನಿವರ್ಸಿಟಿಯ ಪ್ರಖ್ಯಾತ ವಿದ್ವಾಂಸ ರಾದ ಶೇಕ್ ಅಬ್ದುರ್ರಝಾಕ್ ಅಲ್ ಹುಮಾಮಿ ಹಾಗೂ ಶೇಕ್ ಡಾ.ಆರ್.ಕೆ. ನೂರ್ ಮುಹಮ್ಮದ್ ಮದನಿ ಚೆನ್ನೈ, ಶೇಕ್ ಆಬ್ದುಲ್ ಅಝೀಮ್ ಮದನಿ, ಶೇಕ್ ಹಾಫೀಝ್ ಅಬ್ದುಲ್ ಹಸೀಬ್ ಉಮ್ರಿ ಮದನಿ, ಶೇಕ್ ಅಬೂ ಝೈದ್ ಝಮೀರ್ ಪೂನಾ, ಶೇಕ್ ಡಾ.ಅಬ್ದುಲ್ ಮುಕೀತ್ ಮುಹಮ್ಮದಿ ಮದನಿ ಹಾಗೂ ಇತರ ಇಸ್ಲಾಮಿ ವಿದ್ವಾಂಸರು ಭಾಗವಹಿಸಲಿರುವರು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 7337714400/ 733781 4400ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.