ಕಲ್ಯಾಣಪುರ: ಎನ್‌ಸಿಸಿ ನೇಮಕಾತಿ
Update: 2018-07-13 20:03 IST
ಉಡುಪಿ, ಜು.13: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಥಮ ವರ್ಷದ ಎನ್‌ಸಿಸಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಉಡುಪಿಯ ಸುಬೇದಾರ್ ಟ್ರೈನಿಂಗ್ ಜೆ.ಸಿ.ಓ. ದರುಚ್ ಸಿಂಗ್ ಎನ್‌ಸಿಸಿ ಬಗ್ಗೆ ಮಾಹಿತಿ ನೀಡಿ, ಶಿಸ್ತು ಹಾಗೂ ಏಕತೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ದೃಢವಾದ ನಿರ್ಧಾರವನ್ನು ಛಲದಿಂದ ಸಾಧಿಸಬೇಕು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ಎನ್‌ಸಿಸಿ ಅಧಿಕಾರಿ ನಾಗರಾಜ ಆಚಾರ್ಯ ಸ್ವಾಗತಿಸಿ ವಂದಿಸಿದರು.