ಹೂಡೆ: ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾ

Update: 2018-07-13 14:34 GMT

ಹೂಡೆ, ಜು.13: ಹೂಡೆ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಇಂದು ಪ್ಲಾಸ್ಟಿಕ್ ನಿಷೇಧ ಜಾಥಾ ನಡೆಸಿ ಶಾಲಾ ಸುತ್ತ ಮುತ್ತಲಿನ 27 ಅಂಗಡಿಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಜಾಗ್ರತಿ ಮೂಡಿಸಿದರು.

ಕೆಮ್ಮಣ್ಣು ಗ್ರಾಪಂ ಅಧ್ಯಕ್ಷ ಫೌಜಿಯಾ ಸಾದಿಕ್ ಜಾಥಾಕ್ಕೆ ಚಾಲನೆ ನೀಡಿ ದರು. ಶಾಲೆಯಿಂದ ಸುಮಾರು ಎರಡು ಕಿ.ಮೀ.ವರೆಗೆ ಪ್ಲಾಸ್ಟಿಕ್ ವಿರುದ್ಧ ಘೊಷಣೆಗಳನ್ನು ಕೂಗುತ್ತ ಸಾಗಿದ ವಿದ್ಯಾರ್ಥಿಗಳು, ಅಂಗಡಿ ಮಾಲಿಕರಿಗೆ ಗುಲಾಬಿ ಹೂ ನೀಡಿ ಕರ ಪತ್ರವನ್ನು ಹಂಚಿ, ಅಂಗಡಿ ಗೋಡೆಗಳಿಗೆ ಸ್ಟಿಕರ್ ಅಂಟಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಮುಖ್ಯ ಶಿಕ್ಷಕಿ ಸುನಂದ ಮತ್ತು ಎಲ್ಲಾ ಶಿಕ್ಷಕಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News