ಜು.15ರಂದು ಶಿಕ್ಷಣ ಮಾರ್ಗದರ್ಶನ ಶಿಬಿರ
Update: 2018-07-13 20:05 IST
ಉಡುಪಿ, ಜು.13: ಉಡುಪಿಯ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶಿಕ್ಷಣ ಮಾರ್ಗದರ್ಶನ ಶಿಬಿರವು ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜು.15ರಂದು ಜರಗಲಿದೆ.
ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಪಂಚಶಿಲ್ಪ ಶಿಕ್ಷಣ-ತರಬೇತಿ ಹಾಗೂ ಸಾಮಾನ್ಯ ಶಿಕ್ಷಣಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಶಿಬಿರವನ್ನು ಬಾರ್ಕೂರು ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಒಡೆಯರಹೋಬಳಿ ಶ್ರೀಧರ ಆಚಾರ್ಯ ಉದ್ಘಾಟಿಸಲಿರುವರು.
ಮಧ್ಯಾಹ್ನ 12ಗಂಟೆಗೆ ಪ್ರೊ.ಕೆ.ಜಿ.ಕುಂದಣಗಾರರ ಬದುಕು-ಬರಹ’ ಕುರಿತ ಉ.ಕಾ.ಸುಬ್ಬರಾಯಾಚಾರ್ಯ ಸಂಸ್ಮರಣಾ ದತ್ತಿ ಉಪನ್ಯಾಸವನ್ನು ಹುಬ್ಬಳ್ಳಿಯ ಭೀಮಸೇನ ಬಡಿಗೇರ್ ನೀಡಲಿರುವರು ಎಂದು ಸಂಘದ ಅಧ್ಯಕ್ಷ ವಾಸುದೇ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.