ಮಂಗಳಮುಖಿಯರ ಕುರಿತ ‘ನಿರ್ಣಯ’ ಕಿರುಚಿತ್ರಕ್ಕೆ ಮುರ್ಹೂತ
ಕುಂದಾಪುರ, ಜು.13: ರಂಗ ಕಲಾವಿದ ಚೇತನ್ ನೈಲಾಡಿ ನಿರ್ದೇಶನದಲ್ಲಿ ಮೂಡಿಬರಲಿರುವ ಮಂಗಳಮುಖಿಯರ ಜೀವನದ ಏಳುಬೀಳಿನ ಕುರಿತ ವಿಭಿನ್ನ ಕಥಾಹಂದರ ಹೊಂದಿರುವ ‘ನಿರ್ಣಯ’ ಕಿರುಚಿತ್ರದ ಮುಹೂರ್ತ ಸಮಾರಂಭ ಕೋಟ ಸಮೀಪದ ಶಿರಿಯಾರದ ಮೆಕ್ಕೆಕಟ್ಟು ಶ್ರೀನಂದಿಕೇಶ್ವರ ಪ್ರಸನ್ನ ದೇವಸ್ಥಾನದಲ್ಲಿ ಗುರುವಾರ ಜರಗಿತು.
ಚಲನಚಿತ್ರ ಹಾಸ್ಯನಟ ರಘು ಪಾಂಡೇಶ್ವರ ಕ್ಯಾಮೆರಾಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ನಿರ್ಮಾಪಕರಾದ ಚಂದ್ರಶೇಖರ ಶೆಟ್ಟಿ ಶಿರಿಯಾರ ಮತ್ತು ಜಯಂತಿ ಸಿ.ಶೆಟ್ಟಿ, ಸುನೀತಾ ಯಶವಂತ ಪೈ ಉಡುಪಿ, ರಾಘವೇಂದ್ರ ಶಿರಿ ಯಾರ, ನಟ ಪ್ರಭಾಕರ ಕುಂದರ್, ಜರ್ನಿ ಕಿರುಚಿತ್ರದ ನಿರ್ದೇಶಕ ಗುರು ಕುಂದಾಪುರ, ನಂದಿಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಕಿರುಚಿತ್ರ ಮಂಗಳಮುಖಿಯರ ಕುರಿತಾಗಿದ್ದು, ಅವರು ಜೀವನದಲ್ಲಿ ಅನುಭವಿಸುತ್ತಿರುವ ಏಳುಬೀಳುಗಳು, ಈ ಸಮಾಜದಲ್ಲಿ ಅವರು ಪಡುವ ಕಷ್ಟಗಳನ್ನು ಚಿತ್ರಿಸಲಾಗಿದ್ದು ಮಂಗಳಮುಖಿಯರೂ ಕೂಡ ಸಮಾಜದ ಒಂದು ಭಾಗ ಎಂದು ತೋರಿಸಿಕೊಡುವ ಕಿರುಚಿತ್ರ ಇದಾಗಿದೆ.
ಈ ಕಿರುಚಿತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ಜೋಗತಿ ನೃತ್ಯ ಕಲಾವಿದೆ ಬಳ್ಳಾರಿಯ ಮಂಗಳಮುಖಿ ಮಂಜಮ್ಮ ಜೋಗತಿ ಅಭಿನಯಿಸಲಿ ದ್ದಾರೆ. ಕಲಾ ಚಿಗುರು ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನಿರ್ಣಯ ಕಿರುಚಿತ್ರ ಅತ್ಯಲ್ಪಸಮಯದಲ್ಲಿ ತಾಲೂಕಿನ ಹಾಲಾಡಿ, ಅಸೋಡು ಮೊದ ಲಾದಡೆಗಳಲ್ಲಿ ಚಿತ್ರೀಕರಣಗೊಳ್ಳಲಿದೆ.