×
Ad

ಕನ್ನಡ ಅಭಿವೃದ್ಧಿ ಜಾಗೃತಿ ಸಮಿತಿ ಸದಸ್ಯರಾಗಿ ಚಿದಂಬರ ಬೈಕಂಪಾಡಿ ನೇಮಕ

Update: 2018-07-13 20:08 IST

ಮಂಗಳೂರು, ಜು.13: ರಾಜ್ಯ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸರಕಾರೇತರ ಸದಸ್ಯರನ್ನಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಕನ್ನಡ ಜಾಗೃತಿ ಕುರಿತು ಹೊರಡಿಸುವ ಆದೇಶಗಳ ಬಗ್ಗೆ ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ಕೊಡಲು ಮತ್ತು ಅದು ಅನುಷ್ಠಾನವಾಗುತ್ತಿರುವ ಬಗ್ಗೆ ನೋಡಿ ಕೊಳ್ಳಲು ಅವಕಾಶವಿದೆ.

ಚಿದಂಬರ ಬೈಕಂಪಾಡಿ ಅವರು ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ 1987-88ರಲ್ಲಿ ಮೂರು ವರ್ಷಗಳಿಗೆ ನೇಮಕಗೊಂಡಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಅವರನ್ನು ನೇಮಕ ಮಾಡಲಾಗಿತ್ತು.

ಚಿದಂಬರ ಬೈಕಂಪಾಡಿ ಅವರಿಗೆ 2015ನೆ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News