ದೇಸೀ ತರಬೇತಿಗೆ ಅರ್ಜಿ ಅಹ್ವಾನ
Update: 2018-07-13 20:57 IST
ಮಂಗಳೂರು, ಜು.13: ಕೃಷಿ ಇಲಾಖೆಯ ವತಿಯಿಂದ 2018-19ನೇ ಸಾಲಿನಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಆತ್ಮ ಯೋಜನೆಯಡಿ ಮೂರನೇ ತಂಡದ ದೇಸೀ ತರಬೇತಿಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ.
ಒಂದು ತಂಡದಲ್ಲಿ 40 ಜನ ಕೃಷಿ ಪರಿಕರ ಮಾರಾಟಗಾರರಿಗೆ ಮಾತ್ರ ತರಬೇತಿ ನೀಡಲು ಅವಕಾಶವಿರುತ್ತದೆ. ತರಬೇತಿಯಲ್ಲಿ ಪಾಲ್ಗೊಳ್ಳಲು ತರಬೇತಿ ಶುಲ್ಕ ರೂ.10,000 ಪಾವತಿ ಮಾಡಬೇಕಾಗಿದ್ದು, ಆಸಕ್ತರು ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಜು.30ರೊಳಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.