ಜು.16: ಬಿಎಡ್ ಪರೀಕ್ಷಾ ವೇಳಾಪಟ್ಟಿ ಬದಲಾವಣೆ
Update: 2018-07-13 20:59 IST
ಮಂಗಳೂರು, ಜು.13: ಕೊಡಗು ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲಾಡಳಿತ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜು.16ರಂದು ನಡೆಯಬೇಕಿದ್ದ ಬಿ.ಎಡ್. ತೃತೀಯ ಸೆಮಿಸ್ಟರ್ ಹಾಗೂ ಹಳೆ ಪುನರಾವರ್ತಿತ ಸ್ಕೀಮ್‌ನ (2011-12) ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜು.28ಕ್ಕೆ ಮುಂದೂಡಲಾಗಿದೆ. ಉಳಿದಂತೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಲಸಚಿವರು (ಪರೀಕ್ಷಾಂಗ) ಇವರ ಪ್ರಕಟನೆ ತಿಳಿಸಿದೆ.