×
Ad

ಆತೂರು: ನಫೀಸತುಲ್ ಮಿಸ್ರಿಯ ದಅ್ವಾ ಕಾಲೇಜು ಶುಭಾರಂಭ

Update: 2018-07-13 21:07 IST

ಮಂಗಳೂರು, ಜು.13: ಉಪ್ಪಿನಂಗಡಿ ಸಮೀಪದ ಆತೂರು ಹಳೇ ನೇರಂಕಿಯ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದ ವಾದಿ ಹಿಕ್ಮಾದಲ್ಲಿ ನೂತನವಾಗಿ ಆರಂಭಿಸಲಾದ ನಫೀಸತುಲ್ ಮಿಸ್ರಿಯಾ ಮೆಮೋರಿಯಲ್ ದಅ್ವಾ ಕಾಲೇಜು ಇತ್ತೀಚೆಗೆ ಉದ್ಘಾಟನೆಗೊಂಡಿತು.

ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೂತನ ಕಾಲೇಜನ್ನು ಉದ್ಘಾಟಿಸಿದರು. ಡಾ.ಶಾಹ್ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಅನಸ್ ತಂಙಳ್ ಗಂಡಿಬಾಗಿಲು ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು. ಆತೂರು ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ದುಆಗೈದರು. ಮೌಲಾನ ಯು.ಕೆ.ದಾರಿಮಿ ಮೌಲಾನಾ ಚೊಕ್ಕಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ರೂವಾರಿ ಅಬ್ಬಾಸ್ ಭೂಮಿಕ, ಹಮೀದ್ ದಾರಿಮಿ ಆತೂರು, ಅಯೂಬ್, ಮುಹಮ್ಮದ್ ಕೂಟೇಲು, ಸಿದ್ದೀಕ್ ಫೈಝಿ ಕರಾಯ, ಅಬ್ದುಲ್ ರಹ್ಮಾನ್ ಹಾಜಿ ಆತೂರು, ಮಾಜಿ ಅಧ್ಯಕ್ಷ ಇಬ್ರಾಹೀಂ ಹಾಜಿ, ಸುಲೈಮಾನ್ ಪನೆಬೈಲ್, ರಝಾಕ್ ದಾರಿಮಿ ನೇರಂಕಿ, ಬಿ.ಕೆ.ಲತೀಫ್ ಆತೂರು, ಹಸೈನಾರ್ ಹಾಜಿ ಕೊಯ್ಲ, ಅಬ್ದುಲ್ಲ ಆಝಾದ್ ನೆಕ್ಕರೆ, ರಝಾಕ್ ಗಂಡಿಬಾಗಿಲು, ಅಬ್ಬಾಸ್ ಪಿಲಿಗೂಡು ಮತ್ತಿತರರು ಉಪಸ್ಥಿತರಿದ್ದರು.

ಎಸ್.ಬಿ.ದಾರಿಮಿ ಸಂಸ್ಥೆ ಮತ್ತು ಬೀವಿ ನಫೀಸತ್ ಬೀವಿಯ ಪರಿಚಯ ನಡೆಸಿಕೊಟ್ಟರು. ಸಂಸ್ಥೆಯ ವಕ್ತಾರ ಮಾಹಿನ್ ದಾರಿಮಿ ಸ್ವಾಗತಿಸಿದರು. ಬೆಳ್ತಂಗಡಿಯ ಖತೀಬ್ ಹನೀಫ್ ದಾರಿಮಿ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News