×
Ad

ಪಡುಬಿದ್ರೆಯಲ್ಲಿ ಹಜ್‌ಯಾತ್ರಿಗಳಿಗೆ ಬೀಳ್ಕೊಡುಗೆ

Update: 2018-07-14 14:59 IST

ಪಡುಬಿದ್ರೆ, ಜು. 14: ಪಡುಬಿದ್ರೆ ಜಮಾಅತ್ ವ್ಯಾಪ್ತಿಯಿಂದ ಪವಿತ್ರ ಹಜ್ ಯಾತ್ರೆಗೈಯ್ಯಲಿರುವ ಆರು ಮಂದಿಗೆ ಶುಕ್ರವಾರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ನಡೆಯಿತು.

ಪಡುಬಿದ್ರೆ ಜಮಾಅತ್ ಕಮಿಟಿ, ಇಆನತುಲ್ ಮಸಾಕೀನ್ ಹಾಗೂ ಎಸ್‌ಎಸ್‌ಎಫ್ ಪಡುಬಿದ್ರೆ ಶಾಖೆಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. 12 ವರ್ಷಗಳ ಕಾಲ ಮಸೀದಿಯಲ್ಲಿ ಖತೀಬರಾಗಿ ಕಾರ್ಯನಿರ್ವಹಿಸಿದ್ದ ಹಾಜಿ ಎಸ್.ಎಂ.ಅಬ್ದುಲ್ ರಹಿಮಾನ್, ಮಸೀದಿಯ ಹಲವು ವರ್ಷಗಳ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ಜತೆ ಕಾರ್ಯದರ್ಶಿ ಕಾರ್ಯನಿರ್ವಹಿಸುತ್ತಿರುವ ಪಿ.ಕೆ.ಮಯ್ಯದ್ದಿ, ಕೋಶಾಧಿಕಾರಿ ಬಿ.ಎ.ಅಬ್ದುಲ್ ರಹ್ಮಾನ್, ಜಮಾಅತ್ ಸದಸ್ಯರಾದ ಮುಹಮ್ಮದ್ ಸಿದ್ದೀಕ್ ಹಾಗೂ ಶೇಖ್ ರಾಯಿರ್, ಉಮರಬ್ಬ ಶೃಂಗೇರಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಖತೀಬ್ ಹಾಜಿ ಎಸ್.ಎಂ.ಅಬ್ದುಲ್ ರಹಿಮಾನ್ ಅವರ ಶಿಷ್ಯಂದಿರು ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕಂಚಿನಡ್ಕ ಮಸೀದಿ ಖತೀಬ್ ಲತೀಫ್ ಮದನಿ ದುಆ  ನೆರವೇರಿಸಿದರು. ಖತೀಬ್ ಶಂಸುದ್ದೀನ್ ಝುಹುರಿ ಹಜ್‌ಯಾತ್ರಾರ್ಥಿಗಳಿಗೆ ಶುಭಹಾರೈಸಿದರು. ಮಸೀದಿಯ ಅಧ್ಯಕ್ಷ ಹಾಜಿ ಪಿ.ಎ.ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೇಖ್ ಇಸ್ಮಾಯಿಲ್ ಮಾಸ್ಟರ್, ಹಿಮಾಯತುಲ್ ಇಸ್ಲಾಂ ಸಂಘದ ಸಂಚಾಲಕ ಶಬ್ಬೀರ್ ಹುಸೈನ್, ಮಸಾಕೀನ್ ಅಧ್ಯಕ್ಷ ಹುಸೈನ್ ಕಾಡಿಪಟ್ಣ, ಉಪಾಧ್ಯಕ್ಷ ಅಬ್ದುಲ್ ಖಾದರ್ ಮಜಲಕೋಡಿ, ಕಾರ್ಯದರ್ಶಿ ಪಿ.ಎಂ.ಶರೀಫ್, ಜತೆಕಾರ್ಯದರ್ಶಿ ಪಿ.ಎ.ಹಮೀದ್ ಕಂಚಿನಡ್ಕ, ಎಸ್.ಪಿ.ಉಮರ್ ಫಾರೂಕ್, ಎಸ್‌ಎಸ್‌ಎಫ್ ಅಧ್ಯಕ್ಷ ತೌಸೀಫ್ ಕಾಡಿಪಟ್ಣ, ಉಪಾಧ್ಯಕ್ಷ ಶಮೀರ್, ನಿಯಾರ್, ಕಾರ್ಯದರ್ಶಿ ರಫೀಕ್, ಪಿ.ಎಂ.ಸಿದ್ದೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News