ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ವನಮಹೋತ್ಸವ

Update: 2018-07-14 11:24 GMT

ಮೆಲ್ಕಾರ್, ಜು 14: ಆಸರೆ ವಿಮೆನ್ಸ್ ಫೌಂಡೇಶನ್, ಮೆಲ್ಕಾರ್ ಮಹಿಳಾ ಕಾಲೇಜು ಮತ್ತು ಟ್ಯಾಲೆಂಟ್ ಮಹಿಳಾ ಪದವೀಧರರ ಸಂಘ ವತಿಯಿಂದ ಕರ್ನಾಟಕ ಸರಕಾರ ಅರಣ್ಯ ಇಲಾಖೆ, ದ.ಕ ಜಿಲ್ಲೆ ಇವರ ಸಹಯೋಗದಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜ್ ನಲ್ಲಿ ವನ ಮಹೋತ್ಸವ ಕಾರ್ಯಕ್ರಮ  ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಸಾರಾ ಮಶ್ಕೂರ ಮಾತನಾಡುತಾ “ಅರಣ್ಯ ಸಂಪತ್ತು ಎಲ್ಲಾ ನೈಸರ್ಗಿಕ ಸಂಪತ್ತಿನ ಮೂಲ. ಆದರೆ ಮನುಷ್ಯನ ಸ್ವಾರ್ಥದಿಂದಾಗಿ ಪ್ರತೀ ವರ್ಷದಿಂದ ವರ್ಷಕ್ಕೆ ಸಂಪತ್ತು ಕಡಿಮೆಯಾಗುತ್ತಿರುವುದಲ್ಲದೆ ಪ್ರಕೃತಿ ವಿಕೋಪಗಳು ಹಾಗೂ ವನ್ಯಜೀವಿಗಳ ನಿರಾಶ್ರಯ ಸಮಸ್ಯೆಯು ಅಧಿಕಗೊಳ್ಳುತ್ತಿದ್ದು ಪ್ರತೀ ಪ್ರಜೆಯು ಅರಣ್ಯ ಸಂರಕ್ಷಣೆಯ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ, ಜಾಗತಿಕ ತಾಪಮಾನವು ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು ಮರು ಅರಣ್ಯೀಕರಣವೇ ಪರಿಹಾರ ನೀಡಬಲ್ಲುದು” ಎಂದರು.

ಬಂಟ್ವಾಳ ವಲಯ ಅರಣ್ಯ ರಕ್ಷಕ ಶಿವಲಿಂಗ, ಟಿ ಆರ್ ಎಫ್ ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು, ಆಸರೆ ವಿಮೆನ್ಸ್ ಫೌಂಡೇಷನ್ ಉಪಾಧ್ಯಕ್ಷೆ ಆತಿಕಾ ರಫೀಕ್ ಗೌರವ ಅತಿಥಿಗಳಾಗಿದ್ದರು.  ಕಾಲೇಜಿನ ಪ್ರಾಂಶುಪಾಲರಾದ ಬಿ ಕೆ ಅಬ್ದುಲ್ ಲತೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಸರೆ ವಿಮೆನ್ಸ್ ಫೌಂಡೇಶನ್‌ನ ಸೆಲಿಕಾ, ಆಸಿಯಾ ಮುಹಮ್ಮದ್, ಟ್ಯಾಲೆಂಟ್ ಮಹಿಳಾ ಪದವೀಧರರ ಸಂಘದ ಮಿನಾಝಿಯ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಾದ ಹೀನಾ ಕೌಸರ್ ಸ್ವಾಗತಿಸಿ, ತಂಶೀರ ವಂದಿಸಿದರು. ಕಾಲೇಜು ಸಂಸತ್ತು ನಾಯಕಿ ಆಯಿಷಾ ತಸ್ನಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News