×
Ad

ಮನ್‌ಶರ್: ಮಹಿಳಾ ಶರೀಅತ್ ಕಾಲೇಜಿನಲ್ಲಿ ವಿಚಾರಗೋಷ್ಠಿ

Update: 2018-07-14 17:44 IST

ಬೆಳ್ತಂಗಡಿ, ಜು. 14:ಮನ್‌ಶರ್ ಮಹಿಳಾ ಶರೀಅತ್ ಕಾಲೇಜಿನಲ್ಲಿ 'ನೈರ್ಮಲ್ಯ ಮತ್ತು ಮನಶಾಸ್ತ್ರ' ವಿಷಯಕ್ಕೆ ಸಂಬಂಧಿಸಿ ಕಾಲೇಜು ಸಭಾಂಗಣದಲ್ಲಿ ವಿಚಾರಗೋಷ್ಠಿ  ನಡೆಯಿತು.

ಕಾಲೇಜಿನ ನಿರ್ವಹಣಾ ಅಧಿಕಾರಿ  ನಝೀರ್ ಅಹ್‌ಸನಿ, ಮನ್‌ಶರ್ ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ವಸಂತ್ ಕುಮಾರ್ ನಿಟ್ಟೆ ಈ ಸಂದರ್ಭ ಮಾತನಾಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಮುಬೀನ ಅಗ್ನಾಡಿ ಮಾತನಾಡುತ್ತಾ ನಾವು ಎಷ್ಟು ಶುಚಿತ್ವದೊಂದಿಗೆ ಇರುತ್ತೇವೆಯೋ ಅಷ್ಟು ರೋಗವನ್ನು ತಡೆಗಟ್ಟಬಹುದು ಎಂದರು.

ವಿಚಾರಗೋಷ್ಠಿಯಲ್ಲಿ ಮನ್‌ಶರ್ ಶಾಲೆಯ ವಿದ್ಯಾರ್ಥಿಗಳು, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಉಪನ್ಯಾಸಕಿಯರು ಹಾಗೂ ಮನ್‌ಶರ್ ಪ್ಯಾರಾಮೆಡಿಕಲ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೈದರ್ ಭಾಗವಹಿಸಿದ್ದರು. ಮುಈನುದ್ದೀನ್ ಮದನಿ ದುಆ ಮಾಡಿದರು.

ಉಪನ್ಯಾಸಕಿ ಬ್ಲೆನಿನ್‌ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಂಶುಪಾಲೆ ಬಲ್ಕೀಸ್‌ ಸಾದಿಕ್‌ ಸ್ವಾಗತಿಸಿದರು. ವಿದ್ಯಾರ್ಥಿನಿ ನಜ್‌ಲಾ, ಸಲ್ವಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News