ಉಡುಪಿ: ಅಲ್ಪಸಂಖ್ಯಾತರ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಕೆ.ಪಿ.ಇಬ್ರಾಹಿಂ
Update: 2018-07-14 18:02 IST
ಉಡುಪಿ, ಜು.14: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ರಾಗಿ ಕೆ.ಪಿ.ಇಬ್ರಾಹಿಂ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಡುಪಿಯ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ಜೂ.30ರಂದು ವೇದಿಕೆಯ ಅಧ್ಯಕ್ಷ ರಾಬರ್ಟ್ ಮಿನೇಜಸ್ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ನೂತ ಪದಾಧಿಕಾರಿಗಳನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಸೆವರಿನ್ ಡೇಸಾ, ಕಾರ್ಯದರ್ಶಿಯಾಗಿ ಚಾರ್ಲ್ಸ್ ಅಂಬ್ಲರ್, ಕೋಶಾಧಿಕಾರಿಯಾಗಿ ಸಾಮ್ಯುವೆಲ್ ಐಸಾಕ್ ಅವರನ್ನು ಆಯ್ಕೆ ಮಾಡಲಾಯಿತು.