ಉಡುಪಿ: ಕೆಥೊಲಿಕ್ ಸ್ತ್ರೀಯರ ಸಂಘಟನೆ ಪದಾಧಿಕಾರಿಗಳ ಆಯ್ಕೆ
Update: 2018-07-14 18:04 IST
ಉಡುಪಿ, ಜು.14: ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸ್ತ್ರೀಯರ ಸಂಘಟನೆ ಇದರ 2018-19ರ ಸಾಲಿನ ನೂತನ ಅಧ್ಯಕ್ಷರಾಗಿ ಮುದರಂಗಡಿ ಚರ್ಚಿನ ಜೆನೆಟ್ ಬಾರ್ಬೊಜಾ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಿಲ್ಮಾ ಪಿಂಟೊ ಸಾಸ್ತಾನ, ಕಾರ್ಯದರ್ಶಿಯಾಗಿ ಕ್ಲೋಟಿಲ್ಡಾ ಡಿಸೋಜ ಕಾರ್ಕಳ, ಸಹಕಾರ್ಯದರ್ಶಿಯಾಗಿ ಸಿಂತಿಯಾ ಪಿರೇರಾ ಮಿಯಾರ್, ಕೋಶಾಧಿಕಾರಿಯಾಗಿ ಕ್ಲಾರಾ ರೇಗೊ ಕಲ್ಯಾಣಪುರ, ಮೊತಿಯಾಂ ಪತ್ರಿಕೆ ಸಂಪಾದಕಿಯಾಗಿ ಲವೀನಾ ಸಿಕ್ವೇರಾ ಪಾಂಬೂರು, ಸಹ ಸಂಪಾದಕಿಯಾಗಿ ಜೊಸ್ಪಿನ್ ರೊಡ್ರಿಗಸ್ ಕುಂದಾಪುರ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯನ್ನು ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸ್ತ್ರೀಯರ ಸಂಘಟನೆಯ ಸಚೇತಕಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್ ನೇರವೇರಿಸಿದರು. ಈ ವೇಳೆ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ ಉಪಸ್ಥಿತರಿದ್ದರು.