ಚೊಕ್ಕಬೆಟ್ಟು: ದರ್ಸ್ ತರಗತಿಗೆ ಚಾಲನೆ
Update: 2018-07-14 18:31 IST
ಮಂಗಳೂರು, ಜು.14: ಚೊಕ್ಕಬೆಟ್ಟು ಮಸೀದಿಯಲ್ಲಿ ದರ್ಸ್ ಸಂಪ್ರದಾಯ ಶಿಕ್ಷಣವನ್ನು ಗುರುವಾರ ಆರಂಭಿಸಲಾಯಿತು. ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ದರ್ಸ್ ತರಗತಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ಇಮಾಮ್ ಅಬ್ದುಲ್ ಅಝೀಝ್ ದಾರಿಮಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಅಧ್ಯಕ್ಷ ಮುಹಮ್ಮದ್ ಶರೀಫ್, ಸದರ್ ಮುಅಲ್ಲಿಂ ಅಬ್ದುಲ್ ರಹ್ಮಾನ್ ದಾರಿಮಿ, ಕಿನ್ಯ ತಬೂಕ್ ದಾರಿಮಿ, ಅಬ್ದುಲ್ ಖಾದರ್ ಮದನಿ, ಶರೀಫ್ ಹಾಜಿ ಮತ್ತು ಮ್ಯಾನೇಜ್ಮೆಂಟ್ ಕಮಿಟಿಯ ಪದಾಧಿ ಕಾರಿಗಳು ಹಾಗೂ ಜಮಾತಿನ ಪ್ರಮುಖರು ಪಾಲ್ಗೊಂಡಿದ್ದರು.