×
Ad

ಹಿಕ್ಮಃ ಇಂಟರ್ ನ್ಯಾಷನಲ್ ಅಕಾಡಮಿ ವತಿಯಿಂದ ವನಮಹೋತ್ಸವ

Update: 2018-07-14 18:33 IST

ಮಂಗಳೂರು, ಜು.14: ಹಿಕ್ಮಃ ಇಂಟರ್ ನ್ಯಾಷನಲ್ ಅಕಾಡಮಿ ಮಂಗಳೂರು ಇದರ ವತಿಯಿಂದ ವನಮಹೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.

ಮಂಗಳೂರು ಮೇಯರ್ ಭಾಸ್ಕರ್ ಮೊಯ್ಲಿ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಉನ್ನತ ಕಟ್ಟಡಗಳ ಜೊತೆಗೆ ಗಿಡಮರಗಳನ್ನು ನೆಟ್ಟು ಮಂಗಳೂರು ನಗರವನ್ನು ಹಚ್ಚ ಹಸುರಾಗಿ ಇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಹಿಕ್ಮಃ ಇಂಟರ್ ನ್ಯಾಷನಲ್ ಅಕಾಡಮಿ ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಪುಟಾಣಿಗಳಲ್ಲಿ ವನಮಹೋತ್ಸವದ ಕುರಿತು ಜ್ಞಾನ ಮೂಡಿಸುವುದು ಪ್ರಶಂಸನೀಯ ಎಂದು ಹೇಳಿದರು.

ಹಿಕ್ಮಃ ಇಂಟರ್ ನ್ಯಾಷನಲ್ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ನಿಸಾರ್ ಮಾತನಾಡಿ ಅಕಾಡಮಿಯ ವತಿಯಿಂದ ನಗರ ಸಮೀಪದಲ್ಲಿ ಆಧುನಿಕ ಸೌಲಭ್ಯಗಳಿರುವ 10ನೇ ತರಗತಿಯ ತನಕ ( ಸಿಬಿಎಸ್‌ಇ) ಪರಿಸರ ಸ್ನೇಹಿ ವಿದ್ಯಾಲಯವೊಂದನ್ನು ಶೀಘ್ರ ಸ್ಥಾಪಿಸುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದೆ ಎ.ಕೆ. ಗ್ರೂಪ್ ಆಫ್ ಕಂಪೆನಿಯ ಮುಖ್ಯಸ್ಥ ಎ. ಕೆ. ನಿಯಾಝ್ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಅಸ್ಮಾ ಸೈಯದ್ ಉಪಸ್ಥಿತರಿದ್ದರು. ಶಿಕ್ಷಕಿ ಲುಬಾಯಿನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News