ವಿಕಾಸ ಕಾಲೇಜಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ
Update: 2018-07-14 18:34 IST
ಮಂಗಳೂರು, ಜು.14: ಮಾನವನ ಭವಿಷ್ಯದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಆರೋಗ್ಯ, ಸಮತೋಲಿತ ಆಹಾರ ಪದ್ಧತಿ, ಶುದ್ಧ ನೀರು ಹಾಗೂ ರೋಗನಿರೋಧಕ ಶಕ್ತಿಗಳ ಆವಶ್ಯಕತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ನಗರದ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ನ್ಯೂಟ್ರಿಶಿಯನ್ ವಿಶೇಷ ತಜ್ಞ ಡಾ. ನವೀನ್ ಉಪ್ಪಾರ ಮಾತನಾಡಿ ಆಹಾರದಲ್ಲಿ ಕಲಬೆರಕೆ ಹಾಗೂ ಅದರಿಂದ ಮಾನವನ ದೇಹದ ಮೇಲಾಗುವ ದುಷ್ಪರಿಣಾಮ ಹಾಗೂ ಅದನ್ನು ನಿವಾರಿಸುವ ಕ್ರಮಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಸಂಚಾಲಕ ಡಾ.ಡಿ. ಶ್ರೀಪತಿ ರಾವ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಟಿ. ರಾಜಾರಾಮ್ ರಾವ್ ಸಹಿತ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.