×
Ad

ಕೊಂಕಣ ರೈಲ್ವೆಯ ಆದಾಯದಲ್ಲಿ ಹೆಚ್ಚಳ

Update: 2018-07-14 20:50 IST

ಉಡುಪಿ, ಜು.14: ಕೊಂಕಣ ರೈಲ್ವೆ ನಿಗಮವು ಕಳೆದ ಮಾ.31ಕ್ಕೆ ಮುಕ್ತಾಯಗೊಂಡ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ 2,483 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15.63ರಷ್ಟು ಪ್ರಗತಿ ತೋರಿಸಿದೆ.

ಕೊಂಕಣ ರೈಲ್ವೆಯು ಸಾರಿಗೆ ಆದಾಯವಾಗಿ 1,169 ಕೋಟಿ ರೂ. ಹಾಗೂ ಇತರ ಯೋಜನೆಗಳ ಮೂಲಗಳಿಂದ 1255 ಕೋಟಿ ರೂ.ಗಳನ್ನು ಗಳಿಸಿದೆ. ಮುಂಬೈಯ ಕೊಂಕಣ ರೈಲ್ವೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಕೊಂಕಣ ರೈಲ್ವೆ ನಿಗಮದ ಶೇರುದಾರರ 28ನೇ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ಆರ್ಥಿಕ ವರದಿಗೆ ಅನುಮೋದನೆ ನೀಡಲಾಯಿತು.

ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತ ಅಧ್ಯಕ್ಷತೆ ವಹಿಸಿದ್ದರು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News