×
Ad

ರೈಲ್ವೆ ರಕ್ಷಣಾ ದಳದಿಂದ ಮನೆ ಬಿಟ್ಟು ಬಂದ ಬಾಲಕ ಪೋಷಕರ ಮಡಿಲಿಗೆ

Update: 2018-07-14 20:57 IST

ಉಡುಪಿ, ಜು.14: ಶಾಲೆಗೆ ಹೋಗಲು ಇಷ್ಟವಿಲ್ಲದೇ, ಮನೆ ಬಿಟ್ಟು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಮಕೂರು ಜಿಲ್ಲೆಯ 14 ವರ್ಷದ ಬಾಲಕನನ್ನು ಉಡುಪಿ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ, ಬೆಂಗಳೂರು- ಕಾರವಾರ ರೈಲಿನಲ್ಲಿ ಪತ್ತೆ ಹಚ್ಚಿ, ಬಾಲಕನಿಂದ ಪೋಷಕರ ವಿವರ ಪಡೆದು, ತುಮಕೂರು ಪೊಲೀಸರ ಸಹಾಯ ದಿಂದ ಬಾಲಕನನ್ನು ಸುರಕ್ಷಿತ ವಾಗಿ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.

ಬಾಲಕನ ಪೋಷಕರು ಆರ್‌ಪಿಎಪ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದು, ಈ ಕಾರ್ಯದಲ್ಲಿ ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಗಾಂವಕರ್ ಹಾಗೂ ಸಿಬ್ಬಂದಿ ಜೋಸೆಪ್ ಲೊಬೋ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News