ಎಕ್ಸಲೆಂಟ್ ಕಾಲೇಜಿನಲ್ಲಿ ವ್ಯಕ್ತಿತ್ವ-ವಿಕಸನ ಕಾರ್ಯಕ್ರಮ
Update: 2018-07-14 21:41 IST
ಮೂಡುಬಿದಿರೆ, ಜು.14: ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ’ವ್ಯಕ್ತಿ ವಿಕಸನ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅತಿಥಿಯಾಗಿ ಮಂಗಳೂರಿನ ತೃಷ್ ಕ್ಲಾಸಸ್‌ನ ಆಡಳಿತಾಧಿಕಾರಿ ವಿನ್‌ಸೆಂಟ್ ಲೋಬೊ ವಿದ್ಯಾರ್ಥಿ ಪಂಚಲಕ್ಷಣಗಳ ಬಗ್ಗೆ ಮಾತನಾಡಿದರು. ನಾಯಕತ್ವದ ಬಗೆಗಳು ಮತ್ತು ವ್ಯಕ್ತಿತ್ವದಲ್ಲಿ ನಾಯಕತ್ವದ ಅವಶ್ಯಕತೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಐಸಿರಿ ಪ್ರಾರ್ಥಿಸಿ, ಶರತ್ಚಂದ್ರ ಕಾರ್ಯಕ್ರಮ ನಿರೂಪಿಸಿದರು.