ಮಂಗಳೂರು: ಬಾಯಲ್ಲಿ ನೀರೂರಿಸಿದ ಹಲಸು ಹಬ್ಬ

Update: 2018-07-15 09:38 GMT

ಮಂಗಳೂರು, ಜು.15: ಹಲಸಿನ ಹಣ್ಣಿನ ಪಾಯಸ, ಹಲಸಿನ ಐಸ್‌ಕ್ರೀಂ, ಹಲಸಿನ ಬಜ್ಜಿ ಹೀಗೆ ನಾನಾ ಬಗೆಯ ಹಲಸಿನ ಖಾದ್ಯವನ್ನು ಸವಿಯುವ ಅಪೂರ್ವ ಅವಕಾಶವೊಂದು ಮಂಗಳೂರಿನ ಜನತೆಗೆ ರವಿವಾರ ಸಿಕ್ಕಿತ್ತು. ಅದಕ್ಕೆ ಕಾರಣ ಸಾವಯವ ಕೃಷಿಕ ಗ್ರಾಹಕ ಬಳಗದವರು ಮಂಗಳೂರಿನ ಬಾಳಂಭಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಲಸು ಮೇಳ.

ಬೆಳಗ್ಗೆ 7ರಿಂದ ಸಂಜೆಯವರೆಗೆ ನಡೆಯುವ ಹಲಸು ಹಬ್ಬಕ್ಕೆ ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

ಮೇಳದಲ್ಲಿ ವಿವಿಧ ಬಗೆಯ ಹಲಸಿನ ಪ್ರದರ್ಶನ-ಮಾರಾಟ, ವಿವಿಧ ಬಗೆಯ ಹಲಸಿನ ಖಾದ್ಯಗಳ ತಯಾರಿ ಹಾಗೂ ಮಾರಾಟ, ಹಲವು ಬಗೆಯ ಹೂವು-ಹಣ್ಣಿನ ಹಾಗೂ ಅಲಂಕಾರಿಕ ಗಿಡಗಳ ಮಾರಾಟ, ಕಸಿ ಕಟ್ಟಿದ ಹಣ್ಣಿನ ಗಿಡಗಳ ಮಾರಾಟವನ್ನು ಆಯೋಜಿಸಲಾಗಿದೆ. ವೈವಿಧ್ಯಮಯ ಹಲಸಿನ ಖಾದ್ಯಗಳನ್ನು ಸವಿದು ಹಲಸು ಪ್ರಿಯರು ಸಂಭ್ರಮಪಟ್ಟರು.

ಹಲಸಿನ ಬೀಜದ ಪಾಯಸ, ಹಲಸಿನಿಂದ ಮಾಡಿದ ಐಸ್‌ಕ್ರೀಂ, ಹಲಸಿನ ಹಲ್ವ, ಹಲಸಿನ ಹೋಳಿಗೆ, ಹಲಸಿನ ಹಪ್ಪಳ, ಹಲಸಿನ ಪೋಡಿ, ಹಲಸಿನ ಬಜ್ಜಿ, ಹಲಸಿನ ಗಟ್ಟಿ ಮುಂತಾದ ಖಾದ್ಯಗಳು ಆಹಾರ ಪ್ರಿಯರ ಮನ ತಣಿಸಿದವು.

ಹಲಸು ಮೇಳದಲ್ಲಿ ಮಾರಾಟಕ್ಕಿಟ್ಟಿರುವ ತುಳುವ, ಬರ್ಕೆ, ರುದ್ರಾಕ್ಷಿ ಹಲಸು, ಚಂದ್ರ ಹಲಸು ಸೇರಿದಂತೆ ವೈವಿಧ್ಯಮಯ ತಳಿಗಳ ಹಲಸಿನ ಹಣ್ಣುಗಳನ್ನು ಖರೀದಿಸಿ ಗ್ರಾಹಕರು ಖುಷಿ ಪಟ್ಟರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News