×
Ad

ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ 150ನೇ ವರ್ಷದ ಸಂಭ್ರಮಾಚರಣೆ

Update: 2018-07-15 18:01 IST

ಮಂಗಳೂರು, ಜು.15: ನಗರದ ಮೇರಿಹಿಲ್‌ ನಲ್ಲಿರುವ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ 150ನೇ ವರ್ಷದ ಸಂಸ್ಥಾಪನ ದಿನವನ್ನು ಶುಕ್ರವಾರ ಆಚರಿಸಲಾಯಿತು.

ಫಾ.ಪ್ರಕಾಶ್ ಡಿಕುನ್ಹಾ ಒಸಿಡಿ ದಿವ್ಯಬಲಿಪೂಜೆ ನೆರವೇರಿಸಿದರು.ಬಳಿಕ ಶಾಲೆಯ ಕಾರ್ಮೆಲ್ ಬ್ಲೊಸಮ್ಸ್ ಸಂಘದ ಪದಾಧಿಕಾರಿಗಳು, ಸದಸ್ಯರು ಹತ್ತನೇ ಮತ್ತು 3ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ನಗರದ ಸೈಂಟ್ ಆಗ್ನೆಸ್ ಸ್ಪೆಶಲ್ ಸ್ಕೂಲಿಗೆ ಭೇಟಿ ನೀಡಿ ಶಾಲೆಯ ಬುದ್ಧಿಮಾಂದ್ಯ ಮಕ್ಕಳಿಗೆ ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭಶಿಕ್ಷಕ ವೃಂದ ತಮ್ಮ ಶ್ರಮದ ಒಂದು ತುತ್ತಿನಿಂದ ತ್ಯಾಗ ಮಾಡಿ ಒಟ್ಟುಗೂಡಿಸಿದ 1.50 ಲಕ್ಷ ರೂ. ನಿಧಿಯನ್ನು ಶಾಲೆಯ 300 ಬುದ್ಧಿಮಾಂದ್ಯ ಮಕ್ಕಳ ಬಿಸಿಯೂಟ ವ್ಯವಸ್ಥೆಗಾಗಿ ಆಗ್ನೆಸ್ ಸ್ಪೆಷಲ್ ಸ್ಕೂಲ್‌ನ ಪ್ರಾಂಶುಪಾಲೆ ಭಗಿನಿ ಶ್ರುತಿ ಎ.ಸಿ. ಅವರಿಗೆ ನೀಡಲಾಯಿತು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಲಾ ಇಷ್ಟ ದೇವತೆ ಕಾರ್ಮೆಲ್ ಮಾತೆ ಮತ್ತು ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮದರ್ ವೆರೊನಿಕಾ ಅವರ ತ್ಯಾಗಮಯ ಜೀವನ ನಡೆಯನ್ನು ವಿದ್ಯಾರ್ಥಿಗಳು ಕಿರು ರೂಪಕ, ನೃತ್ಯ ಮತ್ತು ಹಾಡುಗಳ ಮೂಲಕ ಪ್ರದರ್ಶಿಸಿದರು.

ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಹಿರಿಯ ಸಲಹೆಗಾರ ಭಗಿನಿ ಜೊಸ್ಲಿನ್ ಜೋಸೆಫ್ ಅವರು ಮದರ್ ವೆರೊನಿಕಾರ ಜೀವನ ಚರಿತ್ರೆ ಕುರಿತ ಕ್ವಿಝ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News