×
Ad

ಉಡುಪಿ ಸಿಟಿ ಬಸ್ ನೌಕರರಿಂದ ರಕ್ತದಾನ ಶಿಬಿರ

Update: 2018-07-15 19:56 IST

ಉಡುಪಿ, ಜು.15: ಉಡುಪಿ ಸಿಟಿ ಬಸ್ ನೌಕರರ ತುರ್ತು ಸೇವಾ ಸಂಘದ ವತಿಯಿಂದ ಮಿತ್ರ ವೃಂದ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರಕ್ತ ನಿಧಿಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಉಡುಪಿ ಶಿರಿಬೀಡು ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಏರ್ಪಡಿಸಲಾಗಿತ್ತು.

ಶಿಬಿರವನ್ನು ಸಿಟಿ ಬಸ್ ಮಾಲಕರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಅಂಚನ್ ಉದ್ಘಾಟಿಸಿದರು. ಉಡುಪಿ ಮಣಿಪಾಲ ರೋಟರಿ ಅಧ್ಯಕ್ಷ ಅಮಿತ್ ಅರ ವಿಂದ್, ಸಿಐಟಿಯು ಸಿಟಿ ಬಸ್ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ರೈ, ಸಮಾಜ ಸೇವಕ ಅಂಬಲಪಾಡಿ ವಿಶು ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಸಹನ ಶೀಲ ಪೈ, ಸಿಟಿ ಬಸ್ ತುರ್ತು ಸೇವಾ ಸಂಘದ ಕೋಶಾಧಿಕಾರಿ ಅವಿನಾಶ್ ಪೂಜಾರಿ, ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಪ್ರಶಾಂತ್ ಹೆಗ್ಡೆ, ಗೀತಾ ಕೌಶಿಕ್ ಉಪಸ್ಥಿತರಿದ್ದರು.

ಸಿಟಿ ಬಸ್ ತುರ್ತು ಸೇವಾ ಸಂಘ ಅಧ್ಯಕ್ಷ ಸಂತೋಷ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಿರಿಬೀಡು ಸರಸ್ವತಿ ಶಾಲೆ ಸಂಚಾಲಕ ಡಾ.ಅರವಿಂದ ನಾಯಕ್ ಅಮ್ಮುಂಜೆ ಸ್ವಾಗತಿಸಿದರು. ಉಡುಪಿ ಸಿಟಿ ಬಸ್ ತುರ್ತು ಸೇವಾ ಸಂಘದ ಕಾರ್ಯದರ್ಶಿ ರಾಬರ್ಟ್ ಪಾಯ್ಸಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News