ಸಿರಿಯ: ಬಂಡುಕೋರ ಗ್ರಾಮ ಸರಕಾರಿ ಪಡೆಗಳ ನಿಯಂತ್ರಣಕ್ಕೆ

Update: 2018-07-15 18:10 GMT

ಬೈರೂತ್ (ಲೆಬನಾನ್), ಜು. 15: ಸಿರಿಯದ ಕುನೀತ್ರ ಪ್ರಾಂತದಲ್ಲಿ ಗ್ರಾಮವೊಂದನ್ನು ಸರಕಾರಿ ಪಡೆಗಳು ವಶಪಡಿಸಿಕೊಂಡಿವೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಇದು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ಗೆ ಹೊಂದಿಕೊಂಡಿರುವ ವಲಯದಲ್ಲಿ ಸಿರಿಯದ ಸರಕಾರಿ ಪಡೆಗಳು ಗಳಿಸಿದ ಮೊದಲ ಯಶಸ್ಸಾಗಿದೆ.

ಗೋಲನ್ ಹೈಟ್ಸ್ ಗಡಿಯಿಂದ 11 ಕಿ.ಮೀ. ದೂರದಲ್ಲಿರುವ ಮಶರ ಗ್ರಾಮವನ್ನು ಸರಕಾರಿ ಪಡೆಗಳು ಭಾರೀ ಶೆಲ್ ದಾಳಿ ನಡೆಸಿದ ಬಳಿಕ ವಶಪಡಿಸಿಕೊಂಡಿವೆ ಎಂದು ಅದು ತಿಳಿಸಿದೆ.

ನೆರೆಯ ದರಾ ಪ್ರಾಂತದಲ್ಲಿರುವ ಅಲ್-ಹಾರ ಪಟ್ಟಣದ ಮೇಲೂ ಸರಕಾರಿ ಪಡೆಗಳು ಭಾರೀ ಪ್ರಮಾಣದಲ್ಲಿ ಶೆಲ್ ದಾಳಿಗಳನ್ನು ನಡೆಸಿವೆ ಎಂದು ವೀಕ್ಷಣಾಲಯ ಹೇಳಿದೆ.

ಸಿರಿಯ ಸರಕಾರಿ ಪಡೆಗಳು ರಶ್ಯ ವಾಯು ಪಡೆಯ ಬೆಂಬಲದೊಂದಿಗೆ ಜೂನ್‌ನಲ್ಲಿ ಆರಂಭಿಸಿದ ಕಾರ್ಯಾಚರಣೆಯಲ್ಲಿ, ದರಾ ಪ್ರಾಂತದ ಹೆಚ್ಚಿನ ಭಾಗಗಳನ್ನು ಈಗಾಗಲೇ ವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News