ಜು.23ರಂದು ಪುದು ಗ್ರಾಪಂ ಗ್ರಾಮಸಭೆ

Update: 2018-07-16 11:35 GMT

ಫರಂಗಿಪೇಟೆ ಜು.16: ಪುದು ಗ್ರಾಪಂನ ಪ್ರಸಕ್ತ ಸಾಲಿನ ಗ್ರಾಮಸಭೆಯು ಜು.23ರಂದು ಸುಜೀರ್‌ನ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಕುಂಜತ್ಕಳ, ಪೇರಿಮಾರ್ ವಾರ್ಡ್ ಸಭೆಯು ಜು.17ರಂದು ಬೆಳಗ್ಗೆ 10:30ಕ್ಕೆ ಕುಂಜತ್ಕಳ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. 11:30ಕ್ಕೆ ಕುಮ್ಡೆಲ್ ವಾರ್ಡ್ ಸಭೆಯು ಕುಮ್ಡೆಲ್ ಅಂಗನವಾಡಿ ಕೇಂದ್ರದಲ್ಲಿ, ಅಪರಾಹ್ನ 2:30ಕ್ಕೆ ನೆತ್ರೆಕೆರೆ ವಾರ್ಡ್ ಸಭೆಯು ನೆತ್ರೆಕೆರೆ ನವೋದಯ ಮಿತ್ರ ಕಲಾ ವೃಂದದಲ್ಲಿ ಜರುಗಲಿದೆ.

ಮಾರಿಪ್ಪಳ್ಳ, ಸುಜೀರ್ ದೈಯಡ್ಕ, ಸುಜೀರ್ ಬದಿಗುಡ್ಡೆ ವಾರ್ಡ್ ಸಭೆಯು ಜು.18ರಂದು 2:30 ಕ್ಕೆ ಸುಜೀರ್ ಮಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ ಎಂದು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News