×
Ad

ಭಟ್ಕಳ: ಕುಸಿದುಬಿದ್ದ ಶಿಥಿಲಗೊಂಡ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟಡ

Update: 2018-07-16 18:20 IST

ಭಟ್ಕಳ, ಜು. 16: ಭಟ್ಕಳ ಬಸ್ ನಿಲ್ದಾಣವನ್ನು ನವೀಕರಿಸುತ್ತಿದ್ದು ಇದಕ್ಕಾಗಿ ತೆರವುಗೊಂಡ ಕಟ್ಟಡವೊಂದು ಮಳೆಗೆ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.

40 ಸುಮಾರು ವರ್ಷಗಳ ಹಳೆಯದಾದ ಕಟ್ಟಡವನ್ನು ಸಾರಿಗೆ ಇಲಾಖೆ ನವೀಕರಿಸುತ್ತಿದ್ದು ಹೊಸ ಬಸ್ ನಿಲ್ದಾಣ ಕಾಮಾಗಾರಿ ಆರಂಭಗೊಂಡಿದೆ. ಬಿರುಕುಗೊಂಡಿರುವ ಕಟ್ಟಡದಲ್ಲಿ ಹೊಟೇಲ್ ನಡೆಸುತ್ತಿದ್ದು ಕಳೆದ ತಿಂಗಳಷ್ಟೆ ಅದನ್ನು ತೆರವುಗೊಳಿಸಿದ್ದಾರೆ. ಈ ಹಿಂದೆಯೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ಮಳಿಗೆಗಳನ್ನು ಖಾಲಿ ಮಾಡುವಂತೆ ಭಟ್ಕಳ ಬಸ್ ಘಟಕದಿಂದ ಅಂಗಡಿಕಾರರಿಗೆ ನೋಟಿಸ್ ನೀಡಲಾಗಿತ್ತು. ಹಲವು ದಿನಗಳ ಹಿಂದೆ ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡಿದ್ದರು .

ರವಿವಾರ ಕಟ್ಟಡದ ಗೋಡೆಯೊಂದು ಕುಸಿದಿತ್ತು. ಇದನ್ನು ಕಂಡ ಡಿಪೋ ಮ್ಯಾನೇಜರ್ ಅಲ್ಲಿ ಜನಸಂಚಾರವನ್ನು ನಿಷೇಧಿಸಿದ್ದರು. ಸೋಮವಾರ ಬೆಳಗ್ಗೆ ಸಂಪೂರ್ಣ ಕಟ್ಟಡ ಕುಸಿದುಬಿದ್ದಿದೆ. ಆದರೆ, ಡಿಪೋ ಮ್ಯಾನೇಜರ್  ಇದನ್ನ ತಾವೆ ತೆರವುಗೊಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸದ್ಯ ಕಟ್ಟಡ ಕುಸಿಯುಯುತ್ತಿರುವ ವೀಡಿಯೊ ವೈರಲ್ ಆಗಿದೆ.

ತಹಶೀಲ್ದಾರಿಂದ ಪರಿಶೀಲನೆ; ಬಸ್ ನಿಲ್ದಾಣದ ಕಟ್ಟಡ ಕುಸಿಯುತ್ತಿರುವ ವೀಡಿಯೊ ವೈರಲ್ ಆಗುತ್ತಿದ್ದಂತೆ ತಾಲೂಕಾಡಳಿತ ಎಚ್ಚೆತ್ತುಕೊಂಡಿದ್ದು ತಹಶೀಲ್ದಾರ್ ವಿ.ಎನ್. ಬಾಡಕರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡಿಸಿದ್ದಾರೆ. ಇಂಜಿನೀಯರ್ಸ್‌ ಗಳ ಸಮ್ಮುಖದಲ್ಲಿ ಸಂಪೂರ್ಣ ಕಟ್ಟಡವನ್ನು ಕೂಡಲೇ ಬೀಳಿಸಬೇಕೆಂಬ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News